DAKSHINA KANNADA
ಪುತ್ತೂರು – ಅನ್ಯಕೋಮಿನ ಯುವತಿ ಜೊತೆ ಮಾತುಕತೆ.. ತಂಡದಿಂದ ಯುವಕರ ಮೇಲೆ ಹಲ್ಲೆ

ಪುತ್ತೂರು ಸಪ್ಟೆಂಬರ್ 01: ಅನ್ಯಕೋಮಿನ ಯುವತಿಯ ಜೊತೆ ಹಿಂದೂ ಯುವಕನೊಬ್ಬ ಮಾತುಕತೆ ನಡೆಸಿದ್ದನ್ನು ಪ್ರಶ್ನಿಸಿ ಅನ್ಯಕೋಮಿನ ತಂಡವೊಂದು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಪುತ್ತೂರು ಸರಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ರಾಯಚೂರಿನ ಮಾನ್ವಿ ನಿವಾಸಿ ಹನುಮಂತರಾಯ ಮತ್ತು ಚೌಡಯ್ಯ ಹಲ್ಲೆಗೊಳಗಾದ ಯುವಕರು. ಹನುಮಂತರಾಯ ಎಂಬ ಯುವಕನಿಗೆ ಆರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಶೇರ್ ಚಾಟ್ ನಲ್ಲಿ ಪುತ್ತೂರಿನ ಯುವತಿಯೊಬ್ಬಳು ಪರಿಚಯವಾಗಿದ್ದಳು. ಈ ಪರಿಚಯ ಸ್ನೇಹಕ್ಕೆ ತಿರುಗಿದ್ದು, ಕಳೆದ ವಾರ ಯುವತಿ ಹನುಮಂತರಾಯನಿಗೆ ಪುತ್ತೂರಿಗೆ ಆಗಮಿಸಲು ಆಹ್ವಾನ ನೀಡಿದ್ದಾಳೆ. ಈ ಹಿನ್ನಲೆ ಹನುಮಂತರಾಯ ಹಾಗೂ ಆತನ ಸ್ನೇಹಿತ ಚೌಡಯ್ಯ ಎನ್ನುವವರು ಮಾನ್ವಿಯಿಂದ ಪುತ್ತೂರಿಗೆ ಆಗಮಿಸಿದ್ದಾರೆ.

ಯುವತಿ ಹನುಮಂತರಾಯ ಅವರನ್ನು ಪುತ್ತೂರು ಬಸ್ಸು ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದು, ಯುವತಿ ತನ್ನ ಸ್ನೇಹಿತಯೊಂದಿಗೆ ಪುತ್ತೂರು ಬಸ್ ನಿಲ್ದಾಣಕ್ಕೆ ಆಗಮಿಸಿ ಹನುಮಂತರಾಯ ಅವನೊಂದಿಗೆ ಬಸ್ಸು ನಿಲ್ದಾಣದ ಒಳಗಿರುವ ಪ್ರಯಾಣಿಕರು ಕುಳಿತುಕೊಳ್ಳುವ ಆಸನದಲ್ಲಿ ಕುಳಿತುಕೊಂಡು ಮಾತುಕತೆ ನಡೆಸುತ್ತಿರುವ ಸಂದರ್ಭ 4 – 5 ಜನ ಯುವಕರು ಇವರ ಬಳಿಗೆ ಬಂದು ಸುತ್ತುವರಿದು ತಡೆದು ನಿಲ್ಲಿಸಿ ಫಿರ್ಯಾದಿದಾರರ ಊರು ಹೆಸರು ವಿಚಾರಿಸಿ ನಮ್ಮ ಊರಿಗೆ ಬಂದು ನಮ್ಮ ಜಾತಿಯ ಹುಡುಗಿಯೊಂದಿಗೆ ಮಾತನಾಡುತ್ತೀರಾ ನಿಮಗೆ ಎಷ್ಟು ಅಹಂಕಾರ ಎಂದು ಬೈದು ಕೈಗಳಿಂದ ಹನುಮಂತರಾಯ ಮತ್ತು ಚೌಡಯ್ಯನಿಗೆ ಹೊಡೆದು ಕಾಲಿನಿಂದ ತುಳಿದು ನಮ್ಮ ಧರ್ಮದ ಹುಡುಗಿಯರ ಸುದ್ದಿಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಆಗಮಿಸಿ ಯುವಕರನ್ನು ಬಿಡಿಸಿದ್ದಾರೆ. ಈ ಘಟನೆ ಕುರಿತಂತೆ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.