Connect with us

DAKSHINA KANNADA

ಪುತ್ತೂರು ಯುವತಿ ಗರ್ಭವತಿಯಾಗಿಸಿ ವಂಚನೆ ಪ್ರಕರಣ – ಶಾಸಕ ಅಶೋಕ್ ರೈ ಈ ಪ್ರಕರಣವನ್ನು ಇತ್ಯರ್ಥಪಡಿಸುವುದಾದರೆ ಬಿಜೆಪಿ ಬೆಂಬಲಿಸುತ್ತದೆ

ಪುತ್ತೂರು ಜುಲೈ 03: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿ ಮಗು ಕರುಣಿಸಿ ಬಳಿಕ ಯುವಕ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನಿಲುವನ್ನು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸ್ಪಷ್ಟ ಪಡಿಸಿದ್ದು, ಜಿಲ್ಲಾ ಬಿಜೆಪಿ ಸಂತ್ರಸ್ತೆಯ ಪರವಾಗಿ ನಿಲ್ಲಲಿದೆ ಎಂದರು.


ಈ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಯುವತಿಗೆ ಅನ್ಯಾಯವಾದ ಘಟನೆಯನ್ನು ನಾವು ಪರಿಶೀಲನೆ ನಡೆಸಿದ್ದೆವೆ. ಮತ್ತು ಬಿಜೆಪಿ ಅನ್ಯಾಯಕ್ಕೊಳಗಾದ ಯುವತಿಯ ಪರವಾಗಿದೆ ಎಂದರು.
ಈ ಘಟನೆ ಕುರಿತಂತೆ ಈಗಾಗಲೇ ಶಾಸಕ ಅಶೋಕ್‌ಕುಮಾರ್ ರೈ ಈ ವಿಚಾರದಲ್ಲಿ ಮಾತುಕತೆ ನಡೆಸಿದ್ದಾರೆ. ಆರೋಪಿಯ ತಂದೆ ಪಿ.ಜಿ.ಜಗನ್ನಿವಾಸ್ ಈ ವಿಚಾರವನ್ನು ಮೊದಲು ಶಾಸಕರ ಗಮನಕ್ಕೆ‌ ತಂದಿದ್ದರು. ಶಾಸಕರು ಸಂತ್ರಸ್ತೆಯನ್ನು ಯುವಕನ ಜೊತೆ ಮದುವೆ ಮಾಡುವ ಭರವಸೆ ನೀಡಿದ್ದರು. ಆದರೆ ಆ ಬಳಿಕ ಸಂತ್ರಸ್ತೆಯ ತಾಯಿ ಯುವಕ‌ ಮದುವೆಯಾಗಲು ಹಿಂದೇಟು‌ ಹಾಕಿರುವ ವಿಚಾರವನ್ನೂ ತಿಳಿಸಿದ್ದರು. ಈ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಶಾಸಕರು ಈ ಪ್ರಕರಣವನ್ನು ಇತ್ಯರ್ಥಪಡಿಸುವುದಾದರೆ ಬಿಜೆಪಿ ಬೆಂಬಲಿಸುತ್ತದೆ ಎಂದರು.

ಪೋಲೀಸರು ಈ ಪ್ರಕರಣದಲ್ಲಿ ಶೀಘ್ರ ಆರೋಪಿ ಯುವಕನ ಬಂಧಿಸಿ, ಆತನನ್ನು ಕಾನೂನಿನಡಿ ತರುವ ಕೆಲಸವನ್ನು ಮಾಡಬೇಕು ಎಂದು ಸತೀಶ್ ಕುಂಪಲ ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *