Connect with us

DAKSHINA KANNADA

ಪುತ್ತೂರು – ದೇಶದ ಪ್ರತೀ ಹಿಂದೂ ಮನೆಗೆ ಆಮಂತ್ರಣದ ಅಕ್ಷತೆ‌ ಮತ್ತು ಶ್ರೀರಾಮನ ಫೋಟೋ ನೀಡುವ ಅಭಿಯಾನ

ಪುತ್ತೂರು ನವೆಂಬರ್ 25: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ದಿನಗಳು ಹತ್ತಿರ ಬರುತ್ತಿದ್ದಂತೆ ಇದೀಗ ದೇಶದಾದ್ಯಂತ ಇರುವ ಪ್ರತೀ ಹಿಂದೂ ಮನೆಗೆ ಆಮಂತ್ರಣದ ಅಕ್ಷತೆ ಮತ್ತು ಶ್ರೀರಾಮನ ಪೋಟೋ ನೀಡುವ ಅಭಿಯಾನ ಆರಂಭವಾಗಲಿದೆ.


ಈ ಬಗ್ಗೆ ಮಾಹಿತಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪುತ್ತೂರು ಜಿಲ್ಲಾ ಸಂಚಾಲಕ ಡಾ.ಕೃಷ್ಣ ಪ್ರಸನ್ನ ದೇಶದಾದ್ಯಂತ ಅಕ್ಷತೆ ಅಭಿಯಾನಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಯೋಜನೆ ಹಾಕಿಕೊಂಡಿದೆ. ಜನವರಿ 1 ರಿಂದ 15 ರವರೆಗೆ ಈ ಅಭಿಯಾನ ನಡೆಯಲಿದ್ದು, ನವೆಂಬರ್ 27 ರಂದು ಪುತ್ತೂರಿಗೆ ಅಕ್ಷತೆ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಿಂದಲೇ ಆಗಮಿಸಲಿದೆ ಎಂದರು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಕ್ಷತೆಗೆ ಪೂಜೆ ನೇರವೆರಿಸಿದ ಜನವರಿ 1 ರಿಂದ 15 ರವರೆಗೆ ಪ್ರತೀ ಹಿಂದು ಮನೆಗೆ ಅಕ್ಷತೆಯನ್ನು ಜನ್ಮಭೂಮಿ ಟ್ರಸ್ಟ್ ನ ಸದಸ್ಯರು ನೀಡಲಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *