DAKSHINA KANNADA
ಪುತ್ತೂರು: 20 ವರ್ಷದ ವಿವಾಹಿತ ಮಹಿಳೆ ಆತ್ಮಹತ್ಯೆ
ಪುತ್ತೂರು, ಡಿಸೆಂಬರ್ 03: ತಾಲೂಕಿನ ದಾರಂದಕುಕ್ಕು ಎಂಬಲ್ಲಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ.2ರ ಗುರುವಾರ ನಡೆದಿದೆ.
ದಾರಂದಕುಕ್ಕು ನಿವಾಸಿಯಾದ ಪುತ್ತೂರಿನ ಕಾಮತ್ ಸ್ವೀಟ್ಸ್ ನಲ್ಲಿ ಉದ್ಯೋಗದಲ್ಲಿರುವ ಭಾಸ್ಕರ್ ಪ್ರಭು ಎಂಬವರ ಪತ್ನಿ ಆಶಿಕಾ(20) ಆತ್ಮಹತ್ಯೆ ಮಾಡಿಕೊಂಡವರು. ಮೃತರು ಪತಿ, 7 ತಿಂಗಳ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಇವರಿಗೆ ಎರಡು ವರ್ಷದ ಹಿಂದೆ ವಿವಾಹವಾಗಿದ್ದು, ಆಶಿಕಾ ಚಿಕ್ಕ ವಯಸ್ಸಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ವಿವಾಹದ ಬಳಿಕವೂ ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.