Connect with us

DAKSHINA KANNADA

ರಾಜ್ಯ ಮಟ್ಟಕ್ಕೆ ಪುತ್ತಿಲ ಪರಿವಾರ: ಅರುಣ್ ಕುಮಾರ್ ಪುತ್ತಿಲ

Share Information

ಪುತ್ತೂರು, ಜುಲೈ 26: ಆರ್ಯಾಪು ಮತ್ತು ನಿಡ್ಪಳ್ಳಿ ಗ್ರಾ.ಪಂ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಪುತ್ತಿಲ ಪರಿವಾರ ಮೂರನೇ ಸ್ಥಾನಕ್ಕೆ ತಳ್ಳಿದೆ, ಈ ಚುನಾವಣೆ ಧರ್ಮ ಮತ್ತು ಹಿಂದುತ್ವದ ಆಧಾರದಲ್ಲಿ ನಡೆದಿದೆ ಎಂದು ಅರುಣ್ ಕುಮಾರ್ ಪುತ್ತಿಲ ಅಭಿಪ್ರಾಯ ಪಟ್ಟಿದ್ದಾರೆ

ಹಣಬಲ,ಹೆಂಡ,ಸೀರೆ ಹಂಚಿ ಮತ ಗಳಿಸಬಹುದೆಂಬುದನ್ನು ಮತದಾನ ಈ ಚುನಾವಣೆಯಲ್ಲಿ ಸುಳ್ಳಾಗಿಸಿದ್ದಾರೆ, ತತ್ವ ಸಿದ್ಧಾಂತ, ಸ್ವಾರ್ಥ‌ ರಾಜಕಾತಣವನ್ನು ಮತದಾರ ಮೆಟ್ಟಿ ನಿಂತಿದ್ದಾರೆ. ಮೋದಿ,ಯೋಗಿ ಆಡಳಿತ ಮಾದರಿ ರಾಜ್ಯದಲ್ಲಿ ಇರಬೇಕು ಅನ್ನೋದು ಪರಿವಾರದ ಆಶಯ, ಇದಕ್ಕೆ ಮತದಾರರೂ ಬೆಂಬಲಿಸಿದ್ದಾರೆ.

ಆರ್ಯಾಪು ಗ್ರಾಮಪಂಚಾಯತ್ ನ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಗಳಿಸಿದೆ. ನಿಡ್ಪಳ್ಳಿ ಗ್ರಾ.ಪಂ ನಲ್ಲಿ ಪುತ್ತಿಲ ಪರಿವಾರ ಎರಡನೇ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೂ ಪರಿವಾರವನ್ನು ವಿಸ್ತರಿಸುವ ಬಗ್ಗೆ ತೀರ್ಮಾನಿಸಲಾಗುವುದು. RSS, BJP, ಸ್ವಾಮೀಜಿಗಳು ಮತ್ತು ಸಂಘಟನೆಯಲ್ಲಿ ದುಡಿಯುವ ಪದಾಧಿಕಾರಿಗಳ ನಮ್ಮ ಜೊತೆಗಿದ್ದಾರೆ, ಎಲ್ಲರ ಆಶಯದಂತೆ ಪರಿವಾರವನ್ನು‌ ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply