DAKSHINA KANNADA
ಕಲ್ಲಡ್ಕ ಪ್ರಭಾಕರ್ ಭಟ್ ಆರೋಪ ಕಾರ್ಯಕರ್ತರಲ್ಲಿ ನೋವುಂಟು ಮಾಡಿದೆ – ಅರುಣ್ ಕುಮಾರ್ ಪುತ್ತಿಲ

ಪುತ್ತೂರು ಎಪ್ರಿಲ್ 28: ಬಿಜೆಪಿ ವಿರುದ್ದ ಬಂಡಾಯ ಎದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ದ ಸಂಘಪರಿವಾರದ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ಮಾಡಿರುವ ಆರೋಪಗಳಿಗೆ ಪುತ್ತಿಲ ಪ್ರತಿಕ್ರಿಯೆ ನೀಡಿದ್ದು, ಕಲ್ಲಡ್ಕ ಪ್ರಭಾಕರ್ ಭಟ್ ಹತಾಶರಾಗಿ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.
ಸುವರ್ಣ ನ್ಯೂಸ್ ನೊಂದಿಗ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ನಾನು ಸ್ಪರ್ಧೆ ಮಾಡುವ ಮೊದಲು ಸಂಘ ಪರಿವಾರದ ಹಿರಿಯ ಆಶೀರ್ವಾದ ಪಡೆದಿದ್ದೇನೆ. ಬಿಜೆಪಿಯ ಪ್ರಮುಖರು ಸ್ವಾಮಿಜಿಗಳ ಜೊತೆ ಚರ್ಚೆ ಮಾಡಿಯೇ ಸ್ಪರ್ಧಿಸಿದ್ದೆನೆ. ಪ್ರಭಾಕರ್ ಭಟ್ ಹಿರಿಯರು ಅವರ ಮೇಲೆ ನಮಗೆ ಅಪಾರವಾದ ಗೌರವವಿದೆ ಇವತ್ತು ಕ್ಷೇತ್ರದಲ್ಲಿನ ಚುನಾವಣಾ ಪ್ರಕ್ರಿಯೆ ನೋಡಿ ಹತಾಶ ಮನೋಭಾವದಿಂದ ಆರೋಪಗಳನ್ನು ಮಾಡುತ್ತಿದ್ದು, ಕಾರ್ಯಕರ್ತರ ಮನಸ್ಸಿನಲ್ಲಿ ನೋವುಂಟು ಮಾಡಿದೆ. ಎಲ್ಲದಕ್ಕೂ ಉತ್ತರ ಮೇ 13ಕ್ಕೆ ಮತದಾರ ಕೊಡಲಿದ್ದಾನೆ. ಹಿಂದುತ್ವಕ್ಕೆ ಈ ಬಾರಿ ಚುನಾವಣೆಯಲ್ಲಿ ಗೆಲವು ಖಂಡಿತ. ನನ್ನ ಸ್ಪರ್ಧೆ ಇರುವುದು ಕಾಂಗ್ರೇಸ್ ವಿರುದ್ದ, ಹಿಂದುತ್ವದ ಮೇಲೆ ಈ ಕ್ಷೇತ್ರ ಈವರೆಗೆ ಗೆದ್ದಿದೆ. ಈ ಬಾರಿಯೂ ಗೆಲವು ಸಿಗುತ್ತದೆ ಎಂದರು.
