DAKSHINA KANNADA
ಸಹಸ್ರಾರು ಸಂಖ್ಯೆಯ ಪುತ್ತಿಲ ಪರಿವಾರದ ಕಾರ್ಯಕರ್ತರು ಈಗ ಅತಂತ್ರರಾಗಿದ್ದಾರೆ – ರಾಜಾರಾಮ್ ಭಟ್

ಪುತ್ತೂರು ಜೂನ್ 1: ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಬಂಡಾಯ ಎದ್ದಿರುವ ಬಿಜೆಪಿಯ ಮಾಜಿ ಶಾಸಕ ರಘುಪತ್ ಭಟ್ ಅವರಿಗೆ ಪುತ್ತಿಲ ಪರಿವಾರದ ಮುಖಂಡರು ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪುತ್ತಿಲ ಪರಿವಾರದ ಮುಖಂಡರಲ್ಲಿ ಒಬ್ಬರಾಗಿದ್ದ ರಾಜಾರಾಮ್ ಭಟ್ ಬಿಜೆಪಿ, ಪರಿವಾರ ಸಂಘಟನೆಯ ನಂಟಿಲ್ಲದ ಯಾರೋ ಒಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇಂಥಹ ವ್ಯವಸ್ಥೆಯ ವಿರುದ್ಧವೇ ಪುತ್ತಿಲ ಪರಿವಾದ ಆರಂಭವಾಗಿರೋದು, ಬಿಜೆಪಿಯ ನಿಲುವಿಗೆ ವಿರುದ್ಧ ನಿಲ್ಲುವ ನಾಯಕರಿಗೆ ಪುತ್ತಿಲ ಪರಿವಾರ ಬೆಂಬಲಿಸಿದೆ. ಬಿಜೆಪಿಯನ್ನು ಆ ಮೂಲಕ ಶುದ್ಧೀಕರಿಸುವ ಕಾರ್ಯ ನಡೆಯಲಿದೆ. ಪುತ್ತಿಲ ಪರಿವಾರದ ರಾಜಕೀಯ ಸಂಘಟನೆ ಈಗ ಇಲ್ಲದಿರಬಹುದು. ಪುತ್ತಿಲ ಪರಿವಾರದ ಕೆಲವೇ ಮುಖಂಡರು ಇಂದು ಬಿಜೆಪಿಯಲ್ಲಿ ಗುರುತಿಸಿಕೊಂಡಿರಬಹುದು. ಆದರೆ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಇಂದಿಗೂ ಅದೇ ಪ್ರತ್ಯೇಕವಾಗಿ ಇದ್ದಾರೆ. ಪುತ್ತಿಲ ಪರಿವಾರ ಮತ್ತು ಹಿಂದೂ ಸಂಘಟನೆಗಳನ್ನು ಬಿಟ್ಟು ಅತಂತ್ರರಾಗಿದ್ದಾರೆ. ಬಿಜೆಪಿಯಲ್ಲಿ ಈ ವ್ಯವಸ್ತೆ ನಿಲ್ಲುವ ತನಕ ಬಂಡಾಯಗಳು ಇದ್ದೇ ಇರುತ್ತದೆ ಎಂದು ರಾಜಾರಾಮ್ ಭಟ್ ಹೇಳಿದ್ದಾರೆ.
