DAKSHINA KANNADA
ಅಮಿತ್ ಶಾ ನನಗೆ ಕರೆ ಮಾಡಿದ್ದಾರೆ ಎನ್ನುವುದು ಸುಳ್ಳು…ಅವರ ಜೊತೆಗೆ ಮಾತನಾಡದಷ್ಟು ಸಣ್ಣತನ ನನ್ನದಲ್ಲ – ಪುತ್ತಿಲ
ಪುತ್ತೂರು ಮೇ 01: ಹಿಂದುತ್ವದ ಆಧಾರದ ಮೇಲೆ ಈ ಕ್ಷೇತ್ರದಲ್ಲಿ ನಾನು ಜಯಗಳಿಸುತ್ತೇನೆ ಎಂಬ ಹಿನ್ನಲೆ ಇದೀಗ ಬಿಜೆಪಿ ಹತಾಶರಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಚುನಾವಣಾ ಆಯೋಗಕ್ಕೆ ದೂರುನೀಡಲಾಗಿದೆ.ಆ ದೂರನ್ನು ಚುನಾವಣಾ ಆಯೋಗವು ತಳ್ಳಿ ಹಾಕಿದೆ. ಇದ ರಿಂದ ಅವರಿಗೆ ಬಹಳಷ್ಟು ಹಿನ್ನಡೆಯಾಗಿದೆ. ಇದು ಅವರ ಅಧಃಪತನದ ಮೊದ ಸೂಚನೆ ಯಾಗಿದೆ ಎಂದು ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಪಕ್ಷದ ಚಿಹ್ನೆ ಮತ್ತು ಹೆಸರು ಹಾಗೂ ಪ್ರಧಾನಿ ಭಾವಚಿತ್ರ ಬಳಸಿಕೊಂಡು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಪಕ್ಷದ ಏಜೆಂಟ್ ಅವರು ದೂರು ನೀಡಿದ್ದರು. ಈ ಬಗ್ಗೆ ಸಷ್ಟನೆ ನೀಡಿರುವ ಅರುಣ್ ಕುಮಾರ್ ಪುತ್ತಿಲ ಅವರು ಇದು ಹತಾಶೆಯಿಂದ ನೀಡಿದ ದೂರು ಎಂದಿದ್ದಾರೆ. ನನ್ನ ವಿರುದ್ಧ ಹಣ ಮತ್ತು ಅಧಿಕಾರ ಇರುವವರ ಸ್ಪರ್ಧೆಯಿದೆ. ಆದರೆ ಚುನಾವಣೆಯ ವೆಚ್ಚವನ್ನು ಭರಿಸಲು ತಾನು ಪ್ರತಿ ಮತದಾರರಿಂದ 10 ರು. ಸಂಗ್ರಹ ಮಾಡುತ್ತಿದ್ದೇನೆ. ನಿನ್ನೆಯ ತನಕ 7 ಲಕ್ಷದ 80 ಸಾವಿರ ರು. ಮತದಾರರು ನೀಡಿ ಪರಸಿದ್ದಾರೆ. ಇದು ಕ್ಷೇತ್ರದ ಜನತೆ ನನ್ನೊಂದಿಗೆ ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ದೇವರ ಮತ್ತು ಕೇಸರಿ ಮೇಲಿನ ವಿಶ್ವಾಸವನ್ನು ಈ ಮೂಲಕ ತೋರಿಸಿದ್ದಾರೆ ಎಂದರು.
ಅಮಿತ್ ಶಾ ನನಗೆ ಕರೆ ಮಾಡಿದ್ದಾರೆ ಎನ್ನುವುದು ಸುಳ್ಳು ಹೇಳಿಕೆ, ಅವರ ಜೊತೆಗೆ ಮಾತನಾಡದಷ್ಟು ಸಣ್ಣತನ ನನ್ನದಲ್ಲ, ಆದರೆ ಆರ್.ಎಸ್.ಎಸ್ ವರಿಷ್ಟ ಮುಕುಂದ್‌ಜಿ ಮತ್ತು ಯಡಿಯೂರಪ್ಪ ಅವರು ಕರೆ ಮಾಡಿದ್ದು ನಿಜ. ಅವರು ನಾಮಪತ್ರ ಹಿಂದೆಗೆಯುವಂತೆ ಹೇಳಿದ್ದರು. ಆದರೆ ಆಗಾಗಲೇ ಕಾಲ ಮುಗಿದು ಹೋಗಿತ್ತು. ನಾನು ಹಿಂದೆಗೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೆ ಎಂದು ಹೇಳಿದರು.