LATEST NEWS
ಪುಷ್ಪ ಸಿನಿಮಾ ರೀತಿಯಲ್ಲೆ ಬ್ಲೆಡ್ ನಲ್ಲಿ ಪತಿಯ ಕುತ್ತಿಗೆ ಕೊಯ್ದ ಪತ್ನಿ…!!

ಹನುಮಕೊಂಡ ಎಪ್ರಿಲ್ 26: ಪುಷ್ಪ ಸಿನೆಮಾದಲ್ಲಿದ್ದ ಬ್ಲೆಡ್ ನಲ್ಲಿ ಪತಿಯ ಕುತ್ತಿಗೆ ಕೊಯ್ಯುವ ದೃಶ್ಯದಂತೆ ನಿಜ ಜೀವನದಲ್ಲಿ ಮಹಿಳೆಯೊಬ್ಬರು ತನ್ನ ಗಂಡನ ಕುತ್ತಿಗೆಯನ್ನು ಕೊಯ್ದಿದ್ದಾರೆ.
ತೆಲಂಗಾಣದ ಹನಮಕೊಂಡ ಎಂಬ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಎಂ.ಅರ್ಚನಾ ಗಂಡನ ಕುತ್ತಿಗೆ ಕೊಯ್ದ ಆರೋಪಿ. ಕಲ್ಲು ಪುಡಿ ಮಾಡುವ ಘಟಕದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ರಾಜು(26) ಅವರನ್ನು ಅರ್ಚನಾ ವಿವಾಹವಾಗಿದ್ದರು.
ದಂಪತಿ ದಾಮೆರ ಮಂಡಲದ ಪಸರಗೊಂಡ ಗ್ರಾಮದಲ್ಲಿ ವಾಸವಿದ್ದರು. ರಾಜು ಕೆಲಸ ಮುಗಿಸಿಕೊಂಡು ಮನೆಗೆ ಬಂದು ರೂಮ್‍ನಲ್ಲಿ ಮಲಗಿಕೊಂಡಿದ್ದಾನೆ. ಈ ವೇಳೆ ಅರ್ಜನಾ ಬ್ಲೇಡ್‍ನಿಂದ ರಾಜು ಕುತ್ತಿಗೆ ಕೊಯ್ದಿದ್ದಾಳೆ. ರೂಮ್‍ನಿಂದ ಕಿರುಚಾಟ ಕೇಳಿಬಂದಿದ್ದು, ಕುಟುಂಬಸ್ಥರು ಮತ್ತು ಸ್ಥಳೀಯರು ಧಾವಿಸಿದ್ದಾರೆ. ಪರಿಣಾಮ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ರಾಜುನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ರಾಜು ಪ್ರಾಣಪಾಯದಿಂದ ಪರಾಗಿದ್ದು, ಕುತ್ತಿಗೆಗೆ ಆರು ಹೊಲಿಗೆ ಹಾಕಲಾಗಿದೆ.

ಆದರೆ ತನಿಖೆ ನಡೆಸಿದಾಗ ಮಹಿಳೆ ತಾನು ಮಾನಸಿಕ ಅಸ್ವಸ್ಥಳಂತೆ ನಟಿಸಿದ್ದಾಳೆ. ಈ ಘಟನೆ ನನಗೆ ತಿಳಿಯದಂತೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾಳೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.