FILM
ಮಹಿಳೆ ಸಾವನಪ್ಪಿದ್ದಾರೆ ಎಂದು ಹೇಳಿದರೂ ಅಲ್ಲು ಅರ್ಜುನ್ ಸಿನೆಮಾ ನೋಡುತ್ತಾ ಕುಳಿತಿದ್ದರು – ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ನಟ ಅಲ್ಲು ಅರ್ಜುನ್ ವಿರುದ್ದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೆಂಡಾಮಂಡಲ
ಹೈದರಾಬಾದ್ ಡಿಸೆಂಬರ್ 21: ಪುಷ್ಪ 2 ಚಿತ್ರದ ಪ್ರಿಮಿಯರ್ ಶೋ ವೇಳೆ ಉಂಟಾದ ಕಾಲ್ತುಳಿತಕ್ಕೆ ಮಹಿಳೆಯೊಬ್ಬರು ಸಾವನಪ್ಪಿ ಮಹಿಳೆಯ ಮಗ ಕೋಮಾ ಸ್ಥಿತಿಯಲ್ಲಿದ್ದು, ಈ ಘಟನೆ ಕುರಿತಂತೆ ಇದೀಗ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ನಟ ಅಲ್ಲು ಅರ್ಜುನ್ ವಿರುದ್ದ ಕೆಂಡಾಮಂಡಲವಾಗಿದ್ದಾರೆ.
ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಮತ್ತು ನಟ ಅಲ್ಲು ಅರ್ಜುನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಐಎಂ ಸದಸ್ಯ ಅಕ್ಬರುದ್ದೀನ್ ಒವೈಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ರೇವಂತ್ ರೆಡ್ಡಿ, ಅವನಿಗೆ ಮನುಷ್ಯತ್ವ ಏನಾದ್ರೂ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.
‘ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಗೆ ಅಲ್ಲು ಅರ್ಜುನ್ ಕಾರಣ ಎಂದು ಆರೋಪಿಸಿರುವ ಸಿಎಂ ರೇವಂತ್ ರೆಡ್ಡಿ, ‘ನಾಯಕ, ನಾಯಕಿಯರಿಗೆ ಥಿಯೇಟರ್ ಗೆ ಬರಬೇಡಿ ಎಂದು ಹೇಳಿಜದ್ದರೂ ಲೆಕ್ಕಿಸದೆ ಬಂದಿದ್ದಾರೆ. ಸಿನಿಮಾ ಥಿಯೇಟರ್ ಗೆ ಬರುವಾಗ ಕಾರಿನ ಸನ್ ರೂಫ್ ತೆಗೆದು ಅಲ್ಲಿ ರೋಡ್ ಶೋ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಆ ಥಿಯೇಟರ್ ನ ಪ್ರೇಕ್ಷಕರು ಮಾತ್ರವಲ್ಲ.. ಅದೇ ರಸ್ತೆಯಲ್ಲಿದ್ದ ಇತರೆ ಥಿಯೇಟರ್ ಗಳಲ್ಲಿದ್ದ ಪ್ರೇಕ್ಷಕರೂ ಕೂಡ ಸಂಧ್ಯಾ ಥಿಯೇಟರ್ ಗೆ ದೌಡಾಯಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದ್ದಾರೆ.
ಥಿಯೇಟರ್ ಬಳಿ ನೂಕುನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಇಷ್ಟಾದರೂ ಹೀರೋ ಅಲ್ಲು ಅರ್ಜುನ್..ಥಿಯೇಟರ್ ನಲ್ಲಿ ಏನೂ ಆಗಿಲ್ಲವೇನೋ ಎಂಬಂತೆ ಸಿನಿಮಾ ನೋಡುತ್ತಾ ಕುಳಿತಿದ್ದಾರೆ. ಇಷ್ಟು ಬೇಜವಾಬ್ದಾರಿಯಿಂದ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ನೋಡಿದ್ರೆ ಹೇಗೆ..? ಕಾಲ್ತುಳಿತದಿಂದ ಒಬ್ಬರು ಸಾವನ್ನಪ್ಪಿದ್ದಾರೆ.