LATEST NEWS
ಭದ್ರತೆ ಪರಿಶೀಲನೆ ನೆಪದಲ್ಲಿ ಬೂಟು ಧರಿಸಿ ಬಂದ ಪೊಲೀಸರು ಶಬರಿಮಲೆಯಲ್ಲಿ ಶುದ್ಧೀಕರಣ
ಭದ್ರತೆ ಪರಿಶೀಲನೆ ನೆಪದಲ್ಲಿ ಬೂಟು ಧರಿಸಿ ಬಂದ ಪೊಲೀಸರು ಶಬರಿಮಲೆಯಲ್ಲಿ ಶುದ್ಧೀಕರಣ
ಕೇರಳ ಡಿಸೆಂಬರ್ 21: ಭದ್ರತೆ ಪರಿಶೀಲನೆ ನೆಪದಲ್ಲಿ ಸನ್ನಿದಾನ ಸಮೀಪ ಪೊಲೀಸರು ಬೂಟು ಧರಿಸಿ ಬಂದ ಹಿನ್ನಲೆಯಲ್ಲಿ ಶಬರಿಮಲೆಯಲ್ಲಿ ಶುದ್ದೀಕರಣ ಕೈಗೊಳ್ಳಲಾಗಿದೆ.
ಶಬರಿಮಲೆಗೆ ತೃತೀಯ ಲಿಂಗಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸರು ರಕ್ಷಣಾ ಕಾರ್ಯ ಕೈಗೊಳ್ಳಲು ಬೂಟು, ಬೆಲ್ಟ್, ಲಾಟಿ ಹಾಗೂ ರಕ್ಷಣಾ ಶೀಲ್ಡ್‌ನೊಂದಿಗೆ ಗರ್ಭಗುಡಿಯ 10 ಮೀಟರ್ ದೂರದ ಕಾಲ್ನಡೆ ಮೇಲ್ಸೇತುವೆವರೆಗೂ ಬಂದಿದ್ದರು.
ಶಬರಿಮಲೆ ಗರ್ಭಗುಡಿ ಸನಿಹ ಪೊಲೀಸರು ಬೂಟು ಧರಿಸಿ ತೆರಳಿದ ಹಿನ್ನೆಲೆಯಲ್ಲಿ ಸನ್ನಿಧಾನ ಆಸುಪಾಸು ಶುದ್ಧೀಕರಣ ಕ್ರಿಯೆ ನಡೆಸಲಾಯಿತು. ತಂತ್ರಿವರ್ಯರ ನಿರ್ದೇಶಾನುಸಾರ ಶುದ್ಧಿ ಕ್ರಿಯೆ ನಡೆಸಲಾಗಿದೆ. ಆಸುಪಾಸು ನೀರಿನಿಂದ ತೊಳೆದ ನಂತರ ಪುರೋಹಿತರು ಶುದ್ಧೀಕರಣ ಕ್ರಿಯೆ ನಡೆಸಿದರು.
ಭದ್ರತೆ ನೀಡುವ ನೆಪದಲ್ಲಿ ಸನ್ನಿಧಾನದ ಗರ್ಭಗುಡಿಯ 10 ಮೀಟರ್ ದೂರದ ಕಾಲ್ನಡೆ ಮೆಲ್ಸೆತುವೆವರೆಗೂ ಬಂದಿದ್ದ ಪೊಲೀಸರ ನಡೆ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದ್ದು ಭಕ್ತರು ಪ್ರತಿಭಟನೆಗೆ ಮುಂದಾಗಿದ್ದರು.
ಈ ನಡುವೆ ಭಕ್ತರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಶಬರಿಮಲೆ ವಿಶೇಷಾಧಿಕಾರಿ ಪೊಲೀಸರಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡು ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಪೊಲೀಸರ ಕ್ರಮವನ್ನು ದೇವಸ್ವಂ ಮಂಡಳಿ ಅಧಿಕಾರಿಗಳೂ ಟೀಕಿಸಿದ್ದರು.