ಕರು ಕದ್ದಿದ್ದಕ್ಕೆ ಆಕ್ರೋಶಗೊಂಡು ಕಾರನ್ನು ಅಟ್ಟಿಸಿಕೊಂಡು ಹೋದ ತಾಯಿ ಹಸು

ಚಿಕ್ಕಮಗಳೂರು ಡಿಸೆಂಬರ್ 21: ಕರುವನ್ನು ಕದ್ದ ಗೋಕಳ್ಳರನ್ನು ತಾಯಿ ಹಸು ಅಟ್ಟಾಡಿಸಿಕೊಂಡ ಹೋದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸ್ ನಿಲ್ದಾಣದ ಹಿಂಭಾಗ ಈ ಘಟನೆ ನಡೆದಿದ್ದು. ಗುರುವಾರ ರಾತ್ರಿ ಮೂವರು ಗೋ ಕಳ್ಳರು ಹಸುಗಳ ಕಳ್ಳತನಕ್ಕೆಂದು ಝೈಲೋ ಕಾರಿನಲ್ಲಿ ಕೊಪ್ಪ ನಗರಕ್ಕೆ ಆಗಮಿಸಿದ್ದಾರೆ.

ಈ ವೇಳೆ ಬೀಡಾಡಿ ಹಸುವನ್ನು ಕಾರಿನೊಳಗೆ ತುಂಬಿಸಲು ಪ್ರಯತ್ನಿಸಿದ್ದಾರೆ. ಆದರೆ ಹಸು ಗೋ ಕಳ್ಳರಿಂದ ತಪ್ಪಿಸಿಕೊಂಡು ಹೋಗಿದೆ. ಈ ನಡುವೆ ಹಸುವಿನ ಕರುವನ್ನು ಕಾರಿನೊಳಗೆ ತುಂಬಿಕೊಂಡು ಹೋಗೋದನ್ನು ಕಂಡ ತಾಯಿ ಹಸು ಕಾರನ್ನು ಅಟ್ಟಿಸಿಕೊಂಡು ಹೋಗಿರುವ ಮನಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆದರೆ ಕರುಗಿಂತ ಮೊದಲೇ ತಾಯಿ ಹಸುವನ್ನು ಹಿಡಿಯಲೆತ್ನಿಸಿದ ಕಳ್ಳರಿಗೆ ಹಸು ಚೆನ್ನಾಗಿ ಪಾಠ ಕಲಿಸಿದೆ. ಎರ್ರಾ ಬಿರ್ರಿ ಓಡಿ ಗೋಕಳ್ಳನನ್ನು ಹೈರಾಣು ಮಾಡಿದೆ.

ಮುಖಕ್ಕೆ ಮಾಸ್ಕ್ ಹಾಕಿ ಬಂದಿದ್ದ ಹಿನ್ನಲೆಯಲ್ಲಿ ಕಳ್ಳರ ಗುರುತು ಪತ್ತೆಯಾಗಿಲ್ಲ. ಮಲೆನಾಡಲ್ಲಿ ಇತ್ತೀಚೆಗೆ ಅವ್ಯಾಹತವಾಗಿ ದನ ಕಳ್ಳತನ ನಡೆಯುತ್ತಿದ್ದು, ಪೊಲೀಸರು ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

VIDEO

3 Shares

Facebook Comments

comments