DAKSHINA KANNADA
ಸುಬ್ರಹ್ಮಣ್ಯ: ಪಂಜದ ಪುಟಾಣಿಯ ಅಭಿನಯಕ್ಕೆ ನಟ ಪುನೀತ್ ರಾಜಕುಮಾರ್ ಪಿಧಾ.. !

ಸುಬ್ರಹ್ಮಣ್ಯ: ಡಾ. ರಾಜಕುಮಾರ್ ಅಭಿನಯದ ಬಬ್ರುವಾಹನ ಚಿತ್ರದ ದೃಶ್ಯವನ್ನು ಅಭಿನಯಿಸಿದ ಪುಟಾಣಿ ಅಭಿಮಾನಿಯ ಅಭಿನಯಕ್ಕೆ ಪುನೀತ್ ರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಬಾಲಕನ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪಂಜದ ಉದ್ಯಮಿ ವೆಂಕಟ್ರಮಣ ಭಟ್ ಹಾಗೂ ಶಶಿಕಲಾ ದಂಪತಿಯ ಪುತ್ರ, ಬೆಂಗಳೂರಿನಲ್ಲಿ ಇಂಜಿನಿಯರ್ ಗಳಾಗಿರುವ ಆದಿತ್ಯ ಹಾಗೂ ಪೂನಂ ದಂಪತಿಯ ಪುತ್ರ ನಾಲ್ಕು ವರ್ಷದ ಆಕಾಶ್ ನ ಅಭಿನಯದ ವಿಡಿಯೋ ಇದೀಗ ವೈರಲ್ ಆಗಿದೆ.

ಡಾ. ರಾಜ್‌ಕುಮಾರ್ ಅಭಿನಯದ ಬಬ್ರುವಾಹನ ಚಿತ್ರದ ಸನ್ನಿವೇಶದ ಸಂಭಾಷಣೆಯನ್ನುಅಭಿನಯಿಸಿದ ವೀಡಿಯೋವನ್ನು ಹೆತ್ತವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಿದ್ದರು. ಇದನ್ನು ಪತ್ರಕರ್ತ ಜೋಗಿ ಅವರು ಪುನೀತ್ ರಾಜ್‌ಕುಮಾರ್ ಅವರಿಗೆ ಕಳುಹಿಸಿದ್ದರು. ವಿಡಿಯೋ ನೋಡಿರುವ ಪುನೀತ್ ಅವರು ಬಾಲಕನ ಅದ್ಭುತ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಬಾಲಕನನ್ನು ಪ್ರೋತ್ಸಾಹಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
https://twitter.com/PuneethRajkumar/status/1305027253353328640