Connect with us

LATEST NEWS

ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಮಹಿಳೆ ಸಾವು

ಮಂಗಳೂರು, ಸೆಪ್ಟೆಂಬರ್ 14: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಅಡ್ಯಾರ್ ಕಟ್ಟೆ ಬಳಿ ನಡೆದಿದೆ. ಮತರನ್ನು ಅಳಪೆ ಪಡೀಲ್‌ ನಿವಾಸಿ 48 ವರ್ಷ ಪ್ರಾಯದ ಮಾಲತಿ ಎಂದು ಗುರುತಿಸಲಾಗಿದೆ.


ಇವರು ಬಸ್ಸಿನಿಂದ ಇಳಿದು ಅಡ್ಯಾರ್ ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಫರಂಗಿಪೇಟೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬೈಕ್‌ ಮಹಿಳೆಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಇನ್ನು ಬೈಕ್‌ ಚಾಲಕನಿಗೆ ಹಾಗೂ ಹಿಂಬದಿ ಸವಾರರಾದ ಬೈಕ್‌ ಚಾಲಕನ ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ನಾಗೋರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments