Connect with us

    LATEST NEWS

    ಕಾರ್ಕಳ – ಪುನೀತ್ ಸಾವಿಗೆ ರಾತ್ರಿ ಇಡೀ ಮಲಗದೇ ಕಣ್ಣೀರು ಹಾಕಿದ ಪುಟ್ಟ ಅಭಿಮಾನಿ

    ಉಡುಪಿ ಅಕ್ಟೋಬರ್ 30: ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾವು ಅಭಿಮಾನಿಗಳಿಗೆ ದೊಡ್ಡ ಶಾಕ್ ನ್ನೆ ನೀಡಿದೆ. ಹಲವು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ನಿಧನದಿಂದ ಜೀವವನ್ನೆ ಕಳೆದುಕೊಂಡಿದ್ದಾರೆ. ಇನ್ನು ಸಣ್ಣಮಕ್ಕಳ ನೆಚ್ಚಿನ ನಟನಾಗಿರುವ ಅಪ್ಪು ಅಗಲಿಕೆ ಮಕ್ಕಳಿಗೂ ಸಹಿಸಲಾರದ ನೋವನ್ನು ತಂದುಕೊಟ್ಟಿದೆ.


    ಕಾರ್ಕಳದ ಪುಟ್ಟ ಬಾಲಕನೊಬ್ಬ ಪುನೀತ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡಿ ಒಂದೇ ಸಮನೆ ಕಣ್ಣೀರಿಟ್ಟಿದ್ದಾರೆ. ಪುನೀತ್ ಮಾಮ ಬೇಕು ಎಂದು ಗೋಳಾಡಿದ ಕಾರ್ಕಳ ಕಲ್ಯದ ಐದು ವರ್ಷದ ದಕ್ಷ್ ಎಂಬ ಮಗು, ಬಾಲ್ಯದಿಂದಲೂ ಪುನೀತ ಚಿತ್ರಗಳನ್ನು ತಪ್ಪದೆ ನೋಡುತ್ತಿದ್ದ ದಕ್ಷ್, ಸಾವಿನ ಸುದ್ದಿ ಟಿವಿಯಲ್ಲಿ ಬರುತ್ತಿದ್ದಂತೆ ನಿನ್ನೆ ರಾತ್ರಿ ಒಂದೇ ಸಮನೆ ಅಳುತ್ತಾ ಕೂತಿದ್ದ, ಅವರ ತಾಯಿ ಮಗುವಿಗೆ ಸಮಾದಾನ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ತುಳುವಿನಲ್ಲಿರುವ ಮಗುವಿನ ಮತ್ತು ತಾಯಿಯ ಸಂಭಾಷಣೆ ಹೀಗಿದೆ, ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ, ನನಗೆ ಅವರನ್ನು ಮರೆಯಲು ಆಗುತ್ತಿಲ್ಲ, ಅವರು ತೀರಿಕೊಂಡಿಲ್ಲ ಸಿನಿಮಾದಲ್ಲಿ ಹಾಗೆ ತೋರಿಸಿದ್ದಾರೆ ಎಂದು ಸಂತೈಸುತ್ತಿರುವ ತಾಯಿ, ನನಗೆ ಮಲಗಿದ್ರೂ ಅವರೇ ಕಣ್ಣ ಮುಂದೆ ಬರುತ್ತಿದ್ದಾರೆ ಎಂದು ಅಳುತ್ತಿರುವ ಮುಗ್ಧ ಬಾಲಕ.

    Share Information
    Advertisement
    Click to comment

    Leave a Reply

    Your email address will not be published. Required fields are marked *