LATEST NEWS
ಪುಣೆ – ಡ್ರಿಮ್ 11 ನಲ್ಲಿ 1.5 ಕೋಟಿ ಗೆದ್ದ ಸಬ್ ಇನ್ಸ್‌ಪೆಕ್ಟರ್ ಸಸ್ಪೆಂಡ್
ಪುಣೆ ಅಕ್ಟೋಬರ್ 19: ಆನ್ ಲೈನ್ ಗೇಮಿಂಗ್ ಆ್ಯಪ್ ಡ್ರಿಮ್ 11 ನಲ್ಲಿ 1.5 ಕೋಟಿ ಹಣ ಗೆದ್ದ ಸಬ್ ಇನ್ಸ್‌ಪೆಕ್ಟರ್ ಸಸ್ಪೆಂಡ್ ಆದ ಘಟನೆ ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪುಣೆಯ ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಝೆಂಡೆ ಅವರು ಆನ್ ಲೈನ್ ಕ್ರಿಕೆಟ್ ಗೇಮಿಂಗ್ ಆ್ಯಪ್ ನಲ್ಲಿ 1.5 ಕೋಟಿ ಹಣ ಗೆದ್ದಿದ್ದರು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆದ ಬಳಿಕ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. ಈ ವಿಚಾರ ಭಾರೀ ವಿರೋಧ ವ್ಯಕ್ತವಾಗಿತ್ತು.
ಸೋಮನಾಥ್ ಅವರು ಅನುಮತಿಯಿಲ್ಲದೆ ಆನ್‌ಲೈನ್ ಆಟವನ್ನು ಆಡಿದ್ದರು ಮತ್ತು ಪೊಲೀಸ್ ಸಮವಸ್ತ್ರವನ್ನು ಧರಿಸಿ ಮಾಧ್ಯಮ ಸಂದರ್ಶನಗಳನ್ನು ನೀಡಿದ್ದಾರೆ. ಅವರು ಕರ್ತವ್ಯ ಲೋಪದ ನಿಯಮವನ್ನು ಉಲ್ಲಂಘಿಸಿದ ಪರಿಣಾಮ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ತನಿಖೆ ನಡೆಸಿದ ಉಪ ಪೊಲೀಸ್ ಆಯುಕ್ತ, ಸ್ವಪ್ನಾ ಗೋರ್ ಅವರು ಹೇಳಿದ್ದಾರೆ. ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಮುಖ್ಯಸ್ಥರು ಪೊಲೀಸ್ ದರ್ಜೆಯ ಅಧಿಕಾರಿಯ ಉಪ ಆಯುಕ್ತರಿಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.