LATEST NEWS
ಪಂಪ್ವೆಲ್ ಪ್ಲೈಓವರ್ ಗೆ ಮತ್ತೊಂದು ಡೆಡ್ ಲೈನ್ ಜನವರಿ 31ಕ್ಕೆ ಕಾಮಗಾರಿ ಪೂರ್ಣ..?

ಪಂಪ್ವೆಲ್ ಪ್ಲೈಓವರ್ ಗೆ ಮತ್ತೊಂದು ಡೆಡ್ ಲೈನ್ ಜನವರಿ 31ಕ್ಕೆ ಕಾಮಗಾರಿ ಪೂರ್ಣ..?
ಮಂಗಳೂರು ಡಿಸೆಂಬರ್ 31: ಜನವರಿ 1ರಂದು ಉದ್ಘಾಟನೆಗೊಳ್ಳಬೇಕಿದ್ದ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ಗೆ ಮತ್ತೊಂದು ಡೆಡ್ ಲೈನ್ ಸಿಕ್ಕಿದ್ದು, ಈ ಬಾರಿ ಜನವರಿ 31ರೊಳಗೆ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ನವಯುಗ ಕಂಪೆನಿ ತಿಳಿಸಿದೆ.
ಇಂದು ಸಂಸದ ನಳಿನ್ ಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಇಂದು ನಡೆದ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ನವಯುಗ ಕಂಪೆನಿಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸಂಸದನಾಗಿ ಎಲ್ಲಾ ನೆರವು ನೀಡಿದ್ದೇನೆ , ಎಲ್ಲಾ ಮಾಡಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ, ಫ್ಲೈ ಓವರ್ ಕಾಮಗಾರಿ ಮುಕ್ತಾಯಕ್ಕೆ 5 ಬಾರಿ ಡೆಡ್ ಲೈನ್ ನೀಡಲಾಗಿದೆ. ಯಾವಾಗ ಕಾಮಗಾರಿ ಮುಗಿಸುತ್ತೀರಿ ಎಂದು ಪ್ರಶ್ನಿಸಿದ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿ ಎಂದ ಅವರು ಕಾಮಗಾರಿ ಮುಗಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಂಪ್ ವೆಲ್ ಕಾಮಗಾರಿಗಾಗಿ ಒಂದು ವರ್ಷದಲ್ಲಿ 500 ಮೀಟಿಂಗ್ ಆಗಿದೆ. ಕಾಮಗಾರಿ ಮುಗಿಸದಿದ್ದರೆ ಚಪ್ಪಲಿಯಲ್ಲಿ ಹೊಡೀರಿ ಅಂತ ಹೇಳಿದ್ರಿ ಆದರೆ ಈಗ ಕಾಮಗಾರಿ ನೀವು ಮುಗಿಸಿಲ್ಲ. ಕಂಪೆನಿ ಅಧಿಕಾರಿಗಳ ಮೇಲೆ FIR ಆಗಿದೆ, ನಿಮ್ಮ ಅಧಿಕಾರಿಗಳನ್ನು ಪೊಲೀಸರು ಆರೆಸ್ಟ್ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ಪಂಪ್ ವೆಲ್ ಫ್ಲೈ ಓವರ್ ಮುಗಿಯುವರೆಗೆ ಟೋಲ್ ಗೇಟ್ ಕ್ಲೋಸ್ ಮಾಡಿ. ಹಣ ಕೇಳಿದರೆ ನಾನೇ ಮಷ್ಕರ ಕೂರುತ್ತೇನೆ ಎಂದು ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ತಾಕೀತು ಮಾಡಿದ್ದಾರೆ. ಇಂದು ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪಂಪ್ವೆಲ್ ಪ್ಲೈ ಓವರ್ ಕಾಮಗಾರಿ ಜನವರಿ 31 ರೊಳಗೆ ಮುಗಿಯಲಿದೆ ಎಂದು ತಿಳಿಸಿದರು.