ರೈಲ್ವೆ ಪ್ಲಾಟ್ ಪಾರ್ಮ್ ನಿಂದ ಜಾರಿ ಬಿದ್ದು ರೈಲಿಗೆ ಸಿಲುಕಿ ಯುವಕ ಸಾವು

ಪುತ್ತೂರು ಡಿ.31: ರೈಲು ಡಿಕ್ಕಿ ಹೊಡೆದ ಪರಿಣಾಮ ಯುವನೋರ್ವ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪ ಕೋಡಿಂಬಾಳ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ನೇಲ್ಯಡ್ಕ ನಿವಾಸಿ ವಿನೀತ್ ಎಂದು ಗುರುತಿಸಲಾಗಿದೆ. ಕೋಡಿಂಬಾಳ ರೈಲ್ವೆ ಸ್ಟೇಷನ್ ಪ್ಲಾಟ್ ಪಾರ್ಮ್ ಹತ್ತಿರ ಮೃತ ದೇಹ ಪತ್ತೆಯಾಗಿದ್ದು, ಮೃತದೇಹದ ಪಕ್ಕದಲ್ಲಿ ಮದ್ಯದ ಬಾಟಲಿ ಕೂಡ ಪತ್ತೆಯಾಗಿದ್ದು, ಕುಡಿದ ಮತ್ತಿನಲ್ಲಿ ಪ್ಲಾಟ್ ಪಾರ್ಮ್ ನಿಂದ ಕೆಳಗೆ ಬಿದ್ದು ರೈಲಿಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಸ್ಥಳಕ್ಕೆ ಕಡಬ ಠಾಣಾ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.