Connect with us

LATEST NEWS

ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆರಂಭಿಕ ಬ್ಯಾಟ್ಸಮನ್ ಚೇತೇಶ್ವರ ಪೂಜಾರ 100 ಎಸೆತಗಳಲ್ಲಿ ಗಳಿಸಿದ್ದು 18 ರನ್

ಅಡಿಲೇಡ್ ಡಿಸೆಂಬರ್ 17: ಆಸ್ಟ್ರೇಲಿಯಾ ಪ್ರವಾಣದಲ್ಲಿ ಟೀ ಇಂಡಿಯಾದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕಳಪೆ ಬ್ಯಾಂಟಿಂಗ್ ಪ್ರದರ್ಶಿಸಿದ್ದು, ಪ್ರಾರಂಭಿಕ ಬ್ಯಾಟ್ಸಮನ್ ಚೇತೇಶ್ವರ ಪೂಜಾರ 100ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಬ್ಯಾಂಟಿಂಗ್ ಮುಂದುವರೆಸಿದ್ದಾರೆ.


ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಗೆಲುವಿನ ಖುಷಿಯಲ್ಲಿರುವ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿ ಪ್ರಾರಂಭಿಕ ಪಂದ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮೊದಲ ಪಂದ್ಯದಲ್ಲೇ ಭಾರತೀಯ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕಲು ಹರಸಾಹಸ ಪಟ್ಟಿದ್ದಾರೆ.

ಸುಮಾರು 30 ಓವರ್ ಗಳನ್ನು ಆಡಿರುವ ಭಾರತ 55 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದು 2 ವಿಕೆಟ್ ಗಳನ್ನು ಕಳೆದುಕೊಂಡಿದೆ, ಆರಂಭಿಕ ಬ್ಯಾಟ್ಸಮನ್ ಚೇತೇಶ್ವರ ಪೂಜಾರ ಯಾವುದೇ ಬೌಂಡರಿ ಇಲ್ಲದೆ 100 ಎಸೆತಗಳಲ್ಲಿ 18 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇತ್ತೀಚಿನ ವರದಿ 40 ಓವರ್ ಗಳಲ್ಲಿ 71/2 ರನ್ ಗಳಿಸಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *