Connect with us

UDUPI

ಉಡುಪಿಯ ಅಭಿಜ್ಞಾ ರಾವ್ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್

ಉಡುಪಿ, ಜುಲೈ 14: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದ್ದು ಉಡುಪಿ ಜಿಲ್ಲೆ ಫಲಿತಾಂಶದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಇನ್ನು ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡ 596 ಅಂಕಗಳನ್ನು ಪಡೆದಿದ್ದಾರೆ.


ಸಂಸ್ಕೃತ ಭಾಷೆಯಲ್ಲಿ 100 ಅಂಕ, ಭೌತ ಶಾಸ್ತ್ರ-100 ಅಂಕ,ರಸಾಯನ ಶಾಸ್ತ್ರ 100 ಅಂಕ, ಗಣಿತ ಶಾಸ್ತ್ರ 100 ಅಂಕ,ಕಂಪ್ಯೂಟರ್ ವಿಜ್ಞಾನದಲ್ಲಿ 100 ಅಂಕ,ಇಂಗ್ಲೀಷ್ ಭಾಷೆಯಲ್ಲಿ 96 ಅಂಕ ಪಡೆದು ಒಟ್ಟು 596 ಅಂಕ ಪಡೆಯುವ ಮೂಲಕ ವಿದ್ಯಾರ್ಥಿನಿ ಅಮೋಘ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದ ಅಭಿಜ್ಞಾ ಇದೀಗ ಪಿಯುಸಿಯಲ್ಲಿಯೂ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

Facebook Comments

comments