DAKSHINA KANNADA
ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ದಂಡ ವಿಧಿಸಿದಕ್ಕೆ ಪೊಲೀಸರಿಗೆ ಸಾರ್ವಜನಿಕವಾಗಿ ಜನಪ್ರತಿನಿಧಿಗಳಿಂದ ನಿಂದನೆ

ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ದಂಡ ವಿಧಿಸಿದಕ್ಕೆ ಪೊಲೀಸರಿಗೆ ಸಾರ್ವಜನಿಕವಾಗಿ ಜನಪ್ರತಿನಿಧಿಗಳಿಂದ ನಿಂದನೆ
ಪುತ್ತೂರು ಸೆಪ್ಟೆಂಬರ್ 27: ಹೆಲ್ಮೆಟ್ ಇಲ್ಲದೆ ದ್ವಿಚಕ್ರದಲ್ಲಿ ಪ್ರಯಾಣಿಸುತ್ತಿದ್ದ ಸವಾರರಿಗೆ ದಂಡ ವಿಧಿಸಿದ ಪೊಲೀಸರ ಕ್ರಮಕ್ಕೆ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿ ಸಾರ್ವಜನಿಕವಾಗಿ ನಿಂಧಿಸಿದ ಘಟನೆ ಕಡಬದಲ್ಲಿ ನಡೆದಿದೆ.
ಕಡಬದ ಪೇಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರರನನ್ನು ಪೊಲೀಸರು ಹಿಡಿದು ದಂಡ ವಿಧಿಸಿದ್ದರು. ಪೊಲೀಸರು ದಂಡ ವಿಧಿಸಿದ ಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಪೊಲೀಸರ ವಿರುದ್ದವೇ ಹರಿಹಾಯ್ದು, ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಕಾನೂನು ಮೀರಿ ವಾಹನ ಚಲಾಯಿಸಿದವರ ಪರವಾಗಿ ಕಡಬದ ಜನಪ್ರತಿನಿಧಿಗಳು ನಿಂತಿರುವುದು ವಿಪರ್ಯಾಸ.
