LATEST NEWS
ಪಬ್ ಜಿ ಗೇಮ್ ಲ್ಲಿ ಮೈಮರೆತ ಬಾಲಕರ ಮೇಲೆ ಹರಿದ ರೈಲು…!

ಮಥುರಾ : ರೈಲ್ವೆ ಹಳಿಗಳ ಮೇಲೆ ಮೊಬೈಲ್ ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ ಇಬ್ಬರು ಬಾಲಕರ ಮೇಲೆ ರೈಲು ಹರಿದು ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಮಥುರಾದ ಲಕ್ಷ್ಮೀನಗರದಲ್ಲಿ ನಡೆದಿದೆ.
ಮೃತ ಬಾಲಕರನ್ನು ಕಪಿಲ್ (18) ಮತ್ತು ರಾಹುಲ್ (16) ಎಂದು ಗುರುತಿಸಲಾಗಿದ್ದು, ಇಬ್ಬರೂ 10ನೇ ತರಗತಿ ವಿಧ್ಯಾರ್ಥಿಗಳಾಗಿದ್ದಾರೆ. ಮಥುರಾ ಕಂಟೋನ್ಮೆಂಟ್ ಹಾಗೂ ರಾಯಾ ರೈಲು ನಿಲ್ದಾಣಗಳ ಮಧ್ಯೆ ಈ ಘಟನೆ ಸಂಭವಿಸಿದೆ.

ಘಟನೆ ನಡೆದ ಸ್ಥಳದಲ್ಲಿ ಎರಡು ಮೊಬೈಲ್‌ಗಳು ಸಿಕ್ಕಿವೆ. ಒಂದು ಹಾನಿಗೊಂಡಿದ್ದರೆ, ಇನ್ನೊಂದರಲ್ಲಿ ಪಬ್‌ಜಿ ಆಟ ಚಾಲೂ ಸ್ಥಿತಿಯಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಪಿಲ್ ಹಾಗೂ ರಾಹುಲ್ ರೈಲು ಹಳಿಯ ಮೇಲೆ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ನಂತರ ಅಲ್ಲಿಯೇ ಕುಳಿತುಕೊಂಡು ಪಬ್‌ಜಿ ಆಡುತ್ತಾ ಮೈ ಮರೆತಿದ್ದರು. ಇದೇ ವೇಳೆ ರೈಲು ಹರಿದು ಮೃತಪಟ್ಟಿದ್ದಾರೆ ಎಂದು ಜಮುನಾ ಫಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.