LATEST NEWS
ಕೊನೆಗೂ ಪಬ್ ಜಿ ‘ಆಟ’ ಮೊಬೈಲ್‌ನಲ್ಲಿ ಪೂರ್ಣ ಬಂದ್
ನವದೆಹಲಿ: ಚೀನಾ ಜತಗೆ ನಂಟು ಹೊಂದಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನಿಷೇಧಕ್ಕೆ ಒಳಗಾಗಿದ್ದ ಪಬ್ ಜಿ ಗೇಮ್ ಇನ್ನು ಮುಂದೆ ಯಾವುದೇ ಮೊಬೈಲ್ ಗಳಲ್ಲಿ ಕಾರ್ಯಾಚರಿಸುವುದಿಲ್ಲ. ಶುಕ್ರವಾರದಿಂದ ಜನಪ್ರಿಯ ಗೇಮಿಂಗ್ ಆಪ್ ಆದ ‘ಪಬ್‌ಜೀ’ ಆಟ ದೇಶದ ಮೊಬೈಲ್‌ಗಳಲ್ಲಿ ಬಂದ್ ಆಗಿದೆ.
ಪಬ್ ಜಿ ಮೊಬೈಲ್ ಹಾಗೂ ಪಬ್ ದಿ ಮೊಬೈಲ್ ಲೈಟ್ ಸೇರಿ 118 ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ಸೆಪ್ಟೆಂಬರ್ 2ರಂದು ನಿಷೇಧ ಹೇರಿತ್ತು. ಹೀಗಾಗಿ ಅಂದಿನಿಂದ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಆಗುತ್ತಿರಲಿಲ್ಲ. ಆದರೆ ನಿಷೇಧಕ್ಕೂ ಮೊದಲೇ ಈ ಆಪ್‌ಗಳನ್ನು ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದವರಿಗೆ ಈ ಆ್ಯಪ್ ಗಳನ್ನು ಬಳಸಬಹುದಾಗಿತ್ತು.
ಈಗ ಕೇಂದ್ರ ಸರಕಾರ ಆದೇಶ ಪಾಲನೆಗಾಗಿ ಚೀನಾದ ಟೆನೆಂಟ್ ಕಂಪನಿ ಈ ಆ್ಯಪ್‌ಗಳಿಗೆ ಒದಗಿಸುತ್ತಿದ್ದ ಎಲ್ಲ ಸೇವೆ ರದ್ದುಗೊಳಿಸಿರುವುದಾಗಿ ತಿಳಿಸಿದ್ದು, ಶುಕ್ರವಾರದಿಂದ ದೇಶದಲ್ಲಿ ಪಬ್ ಜಿ ಗೇಮ್ ಸಂಪೂರ್ಣ ಬಂದ್ ಆಗಲಿದೆ. ಭಾರತದಲ್ಲಿ ಇವುಗಳ ಪ್ರಕಟಿಸಲು ಪಡೆದಿದ್ದ ಹಕ್ಕನ್ನು ಅವುಗಳ ಬೌದ್ದಿಕ ಹಕ್ಕು ಹೊಂದಿದ ಸಂಸ್ಥೆಗೆ ಮರಳಿಸಲಾಗುತ್ತದೆ.