Connect with us

    LATEST NEWS

    ಪಿಯು ಬೋರ್ಡ್ ಬೇಜಾವಾಬ್ದಾರಿ ಸಂಕಷ್ಟಕ್ಕೆ ಸಿಲುಕಿದ ಬಡ ವಿದ್ಯಾರ್ಥಿನಿ

    ಉಡುಪಿ : ಕಾರ್ಕಳದ ಕುಕ್ಕುಂದೂರು ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಉತ್ತಮ ಅಂಕ ಪಡೆದು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದರೂ , ಪಿ.ಯು ಶಿಕ್ಷಣ ಮಂಡಳಿಯ ಬೇಜಾವಾಬ್ದಾರಿಯಿಂದ ಕಡಿಮೆ ಅಂಕ ಸಿಗವ ಮೂಲಕ ಅನಾಯಕ್ಕೆ ಒಳಗಾಗಿದ್ದಾಳೆ.

    ಐದು ವಿಷಯಗಳಲ್ಲಿ ಒಳ್ಳೆಯ ಅಂಕವನ್ನು ಗಳಿಸಿದ ವಿದ್ಯಾರ್ಥಿನಿ ಝುಹಾ ಪಿರ್ದೆಶ್ ಅರ್ಥ ಶಾಸ್ತ್ರ ವಿಷಯದಲ್ಲಿ ಕಡಿಮೆ ಅಂಕ ಪಲಿತಾಂಶದಲ್ಲಿ ಪ್ರಕಟವಾಗಿತ್ತು.. ಆದರೆ ಅರ್ಥ ಶಾಸ್ತ್ರ ವಿಭಾಗದಲ್ಲಿ ಉತ್ತಮ ಅಂಕ ಗಳಿಸುವ ವಿಶ್ವಾಸ ಹೊಂದಿದ್ದ ವಿದ್ಯಾರ್ಥಿನಿ ಈ ಫಲಿತಾಂಶ ನೋಡಿ ಆಘಾತ ಪಟ್ಟಿದ್ದಳು. ಅರ್ಥ ಶಾಸ್ತ್ರ ವಿಷಯದ ಉತ್ತರ ಪತ್ರಿಕೆಯ ಪ್ರತಿಯನ್ನು ತಂದೆಯ ಮೂಲಕ ಆನ್ ಲೈನ್ ನಲ್ಲಿ ತರಿಸಿಕೊಂಡಾಗ ಅಂಕ ಪಟ್ಟಿಯಲ್ಲಿ ವ್ಯತ್ಯಾಸಗಳಾಗಿರುವುದು ಆಕೆಗೆ ಗೊತ್ತಾಗಿದೆ.


    ವಿದ್ಯಾರ್ಥಿನಿ ಝುಹಾ ಪಿರ್ದೇಶ್ ಬರೆದ ಅರ್ಥ ಶಾಸ್ತ್ರ ವಿಷಯದ ಉತ್ತರ ಪತ್ರಿಕೆಯಲ್ಲಿ ಆಕೆಗೆ 82 ಅಂಕ ದೊರಕಿತ್ತು. ಪರೀಕ್ಷಾ ಮಂಡಳಿಯ ಪ್ರಕಟಿತ ಅಂಕ ಕಾಲಂನಲ್ಲಿ 82ರ ಬದಲಿಗೆ 49 ಎಂದು ತಪ್ಪಾಗಿ ಮುದ್ರಿತವಾಗಿತ್ತು. ಅಂಕಗಳನ್ನು ನಮೂದಿಸುವಲ್ಲಿ ಇಲಾಖೆ ತಪ್ಪಸೆಸಗಿತ್ತು. ಇಷ್ಟಲ್ಲದೆ. ಹೆಚ್ಚು ಅಂಕ ಸಿಗದಿರುವ ಕುರಿತು ಸಂಶಯಗೊಂಡ ವಿದ್ಯಾರ್ಥಿನಿ ಇದೆ ವಿಷಯದ ಕುರಿತಂತೆ ಉತ್ತರ ಪತ್ರಿಕೆಯನ್ನು ಅರ್ಥ ಶಾಸ್ತ್ರ ವಿಭಾಗದ ಉಪನ್ಯಾಸಕ ಮಾಣದವ ಭಟ್ ಅವರಲ್ಲಿ ಪರಿಶೀಲನೆಗೆ ನೀಡಿದ್ದಳು. ಪರಿಶೀಲಿಸಿದ ಉಪನ್ಯಾಸಕರು ಈಕೆಗೆ 8 ಅಂಕ ಹೆಚ್ಚು ಸಿಗಬೇಕಿತ್ತು ಎನ್ನುವ ಅಬಿಪ್ರಾಯ ಪಟ್ಟಿದ್ದಾರೆ. ಆಕೆಯ ಅಂಕ ಪಟ್ಟಿಯಲ್ಲಿ ವ್ಯತ್ಯಾಸವಾಗದೆ ಇರುತಿದ್ದರೆ ಆಕೆ ಕಾಲೇಜಿನ ಫಲಿತಾಂಶ ಪಟ್ಟಿಯಲ್ಲಿ ಮೊದಲ ಸಾಲಿನ ನಾಲ್ಕನೆ ಸ್ಥಾನ ಮತ್ತು ರ್ಯಾಂಕ್ ಸಾಲಿನಲ್ಲಿ 10ನೇ ಶ್ರೇಣಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಳು. ಪಿಯು ಬೋರ್ಡ್ ತಪ್ಪಿನಿಂದ ಆಕೆ ಈ ಸ್ಥಾನ ಕೈ ತಪ್ಪಿದೆ.

    ಈಕೆ ಶಾಲಾ ಬಸ್ ಚಾಲಕರಾಗಿರುವ ಶಬೀರ್ ದಂಪತಿ ಪುತ್ರಿ..ಬಡ ಕುಟುಂಬದ ಹಿನ್ನಲೆಯವರು. ಫಲಿತಾಂಶದಲ್ಲಿ ವ್ಯತ್ಯಾಸಗಳಿಂದ ಬೇಸತ್ತು ಉತ್ತರ ಪತ್ರಿಕೆಯನ್ನು ಮರು ಮೌಲ್ಯ ಮಾಪನಕ್ಕೆ ರೂ 1560 ರೂ. ನೀಡಿ ಅರ್ಜಿ ಸಲ್ಲಿಸಿದ್ದಾರೆ. ಮಂಡಳಿ ತಪ್ಪಿಗೆ ಹೆತ್ತವರು. ವಿದ್ಯಾರ್ಥಿನಿ ದಂಡ ನೀಡುವಂತಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *