Connect with us

    LATEST NEWS

    ಅಳಿಯ ರಿಷಿ ಸುನಕ್‌ ಬಗ್ಗೆ ಹೆಮ್ಮೆಯಾಗುತ್ತಿದೆ: ನಾರಾಯಣಮೂರ್ತಿ

    ನವದೆಹಲಿ, ಅಕ್ಟೋಬರ್ 25: ಬ್ರಿಟನ್‌ ಪ್ರಧಾನಿ ಹುದ್ದೆಗೆ ಏರಿದ ರಿಷಿ ಸುನಕ್‌ ಅವರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅಳಿಯನಿಗೆ ಉನ್ನತ ಸ್ಥಾನಕ್ಕೇರಿ ಇತಿಹಾಸ ಸಷ್ಟಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.

    ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರ ಗಂಡ, 42 ವರ್ಷದ ರಿಷಿ ಸುನಕ್‌ ಅವರು ಭಾನುವಾರ ಬ್ರಿಟನ್‌ನ ಆಡಳಿತರೂಢ ಕನ್ಸರ್ವೇಟಿವ್‌ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ಆ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಬ್ರಿಟನ್‌ ಜನತೆಗೆ ಉತ್ತಮವಾದುದ್ದನ್ನೇ ಮಾಡುತ್ತಾರೆ ಎಂಬ ಭರವಸೆ ನಮಗಿದೆ ಎಂದು ನಾರಾಯಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2009ರಲ್ಲಿ ಅಕ್ಷತಾರನ್ನು ರಿಷಿ ವಿವಾಹವಾದರು. ದಂಪತಿಗೆ ಕೃಷ್ಣಾ ಮತ್ತು ಅನೂಷ್ಕಾ ಎಂಬ ಹೆಸರಿನ ಇಬ್ಬರು ಪುತ್ರಿಯರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply