LATEST NEWS
ಕೊಲೆಗಡುಕರ ಶೀಘ್ರ ಬಂಧನಕ್ಕೆ ಆಗ್ರಹಿಸಿ ಕೋಟದಲ್ಲಿ ಬೃಹತ್ ಪ್ರತಿಭಟನೆ

ಕೊಲೆಗಡುಕರ ಶೀಘ್ರ ಬಂಧನಕ್ಕೆ ಆಗ್ರಹಿಸಿ ಕೋಟದಲ್ಲಿ ಬೃಹತ್ ಪ್ರತಿಭಟನೆ
ಉಡುಪಿ ಫೆಬ್ರವರಿ 3: ಉಡುಪಿ ಜಿಲ್ಲೆಯ ಕೋಟದಲ್ಲಿ ವಾರದ ಹಿಂದೆ ನಡೆದ ಅಮಾಯಕ ಯುವಕರೀಬ್ಬರ ಕೊಲೆ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.
ಕೋಟದಲ್ಲಿ ವಾರದ ಹಿಂದೆ ಅಮಾಯಕ ಇಬ್ಬರು ಯುವಕರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯಾಗಿ ಒಂದು ವಾರ ಕಳೆದರೂ ಸ್ಥಳೀಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ಆರೋಪಿಸಲಾಗಿದ್ದು, ಪೊಲೀಸರು ಕೂಡಲೇ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಬೇಕೆಂದು ಆರೋಪಿಸಿ ಸುಮಾರು 25 ಕ್ಕೂ ಅಧಿಕ ಸ್ಥಳೀಯ ಸಂಘ ಸಂಸ್ಥೆಗಳು ಪ್ರತಿಭಟನಾ ಸಭೆ ಆಗ್ರಹಿಸಿದರು.

ಕೋಟ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಂತೆ ಮಾರ್ಕೇಟ್ ಬಳಿ ಈ ಪ್ರತಿಭಟನಾ ಸಭೆ ಹಮ್ಮಿಕೊಳ್ಳಳಾಗಿತ್ತು, ಕೊಲೆ ಆರೋಪಿಗಳಾದ ಹರೀಶ್ ರೆಡ್ಡಿ ಮತ್ತು ಸಹೋದರನ್ನು ಶೀಘ್ರದಲ್ಲೇ ಬಂಧಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಹರೀಶ್ ರೆಡ್ಡಿ, ಹರೀಶ್ ರೆಡ್ಡಿ ಕುಟುಂಬ ಸಮೇತ ಗಡಿಪಾರು ಮಾಡಿ, ಆರೋಪಿಗಳಿಗೆ ಮರಣ ದಂಡನೆ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಮಾಯಕ ಯುವಕರ ಕುಟುಂಬಕ್ಕೆ ನ್ಯಾಯ ನೀಡಿ ಎಂದು ಪ್ರತಿಭಟನಾ ಸಭೆಯಲ್ಲಿ ಒತ್ತಾಯಿಸಲಾಯಿತು. ಕಾರಂತರ ಹುಟ್ಟೂರು ಕೋಟವನ್ನು ಮುಂದೆ ಕೊಲೆಗಡುಕ ಊರಾಗಿ ಮಾಡಬೇಡಿ, ಕೂಡಲೇ ಕೊಲೆಗಡುಕರನ್ನು ಬಂಧಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.