Connect with us

    LATEST NEWS

     ದೇವಿ ಹೆಸರಿನಲ್ಲಿ ಬಿಜೆಪಿ ನಾಯಕರ ಬಹುಪರಾಕ್, ಅಮ್ಮನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಬಿಜೆಪಿಯ ರಾಜಕೀಯ ಗಿಮಿಕ್

     ದೇವಿ ಹೆಸರಿನಲ್ಲಿ ಬಿಜೆಪಿ ನಾಯಕರ ಬಹುಪರಾಕ್, ಅಮ್ಮನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಬಿಜೆಯ ರಾಜಕೀಯ ಗಿಮಿಕ್

    ಮಂಗಳೂರು,ಫೆಬ್ರವರಿ 03 : ಭಕ್ತರ ಪಾಲಿನ ಆರಾಧ್ಯಮೂರ್ತಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರತಿವರ್ಷವೂ ಅಮ್ಮನಡೆಗೆ ನಮ್ಮ ನಡಿಗೆ ಎನ್ನುವ ಕಾರ್ಯಕ್ರಮವನ್ನು ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.ಜಾತಿ, ಪಕ್ಷಗಳ ಎಲ್ಲೆ ಮೀರಿ ಎಲ್ಲಾ ದಕ್ಷಿಣಕನ್ನಡ ಜಿಲ್ಲೆಯ ದೇವಿಯ ಆರಾಧಕರು ಈ ನಡಿಗೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.

    ಕಳೆದ ಏಳೆಂಟು ವರ್ಷಗಳಿಂದ ಈ ಭಕ್ತಿ ಪೂರ್ವಕವಾಗಿ ಈ ಕಾರ್ಯಕ್ರಮ ನಡೆದುಕೊಂಡು ಬಂದಿದೆ.  ಫೆಬ್ರವರಿ 3 ರ ಇಂದಿನ ಭಾನುವಾರದಂದು ಈ ಬಾರಿಯ ಅಮ್ಮನಡೆಗೆ ನಮ್ಮ ನಡೆ ಪಾದಯಾತ್ರೆ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು.

    ಈ ಬಾರಿ ಇದು ಧಾರ್ಮಿಕ ಕಾರ್ಯಕ್ರಮವೂ, ಅಥವಾ ಬಿಜೆಪಿ ಪಕ್ಷದ ಪಾದಯಾತ್ರೆಯೋ ಎನ್ನುವ ಅನುಮಾನ ಎಲ್ಲರಲ್ಲೂ ಮೂಡಿತ್ತು.

    ಹೌದು ಜಿಲ್ಲೆಯ ಇಡೀ ಬಿಜೆಪಿ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮುಂದೆ ಬರುವ ಲೋಕಸಭಾ ಚುನಾವಣೆಗಾಗಿ ಈ ಧಾರ್ಮಿಕ ಕಾರ್ಯಕ್ರಮವನ್ನು ಅತ್ಯಂತ ಚಾಣಡಕ್ಷತನದಿಂದ ಬಳಸಿಕೊಂಡಿದ್ದಾರೆ. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ‌ರಾದ ವೇದವ್ಯಾಸ್ ಕಾಮತ್ ,ಹರೀಶ್ ಪೂಂಜಾ,ಹರಿಕೃಷ್ಣ ಬಂಟ್ವಾಳ್, ಮೋನಪ್ಪ ಬಂಢಾರಿ, ಡಾ। ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲಾ ಬಿಜೆಪಿ ನಾಯಕರು, ಆರ್‌ಎಸ್‌ಎಸ್‌ ನಾಕರುಗಳು ಪಾಲ್ಗೊಂಡಿದ್ದರು.

    ಮಂಗಳೂರಿನ ಮರವೂರು ಜಂಕ್ಷನ್‌ನಿಂದ ಕಟೀಲು ತನಕ ಸಾಗಿದ ಈ ಪಾದಯಾತ್ರೆ ಯ ಮಧ್ಯೆ ಮಧ್ಯೆ ನಡೆದಂತಹ ಕಾರ್ಯಕ್ರಮದಲ್ಲಿ ಶ್ರೀ ದೇವಿಯ ಆರಾಧನೆ ಬಿಟ್ಟು ಬೇರೆನೇ ಅಧಿಕ ಪ್ರಸಂಗ ನಡೆಯುತ್ತಿತ್ತು.

    ಮೈಕ್‌ ನಲ್ಲಿ ಬಿಜೆಪಿಯ ಆ ಮುಖಂಡ , ಬಿಜೆಪಿಯ ಈ ಮುಖಂಡ ಬಂದಿದ್ದಾರೆಂದು ಬಹುಪರಾಕ್ ಮಾಡಿದ್ದೇ ಮಾಡಿದ್ದು.

    ಇದನ್ನೆಲ್ಲಾ ಅತ್ಯಂತ ಸಮೀಪದಿಂದ ನೋಡಿದ ದೇವಿ ಭಕ್ತರಿಗೆ ಇದು ದೇವಿಯ ಕಾರ್ಯಕ್ರಮವೋ ಅಥವಾ ಬಿಜೆಪಿಯ ಪ್ರಚಾರ ಜಾಥಾದ ಕಾರ್ಯಕ್ರಮವೋ ಎನ್ನುವ ಗೊಂದಲವೂ ಮೂಡಿತ್ತು‌.

    ಜಿಲ್ಲೆಯ ಅತ್ಯಂತ ಶ್ರದ್ದೆಯ ಹಾಗೂ ಅಷ್ಟೇ ಪವಿತ್ರ್ಯತೆಯ ಕಟೀಲು ದುರ್ಗಾಪರಮೇಶ್ವರಿ ಯ ಹೆಸರಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಅನಿವಾರ್ಯತೆ ಬಿಜೆಪಿ ಪಕ್ಷಕ್ಕೇಕೆ ಬಂತು ಎನ್ಬುವ ಪ್ರಶ್ನೆಯೂ ಏಳತೊಡಗಿದೆ.

    ದೇವಿಗಿಂತಲೂ ಪಾದಯಾತ್ರೆಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರ ಪಾರಾಯಣ ನಡೆಸಿದ್ದು ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply