LATEST NEWS
ಆರ್ ಟಿಇ ಸೀಟು ಹಂಚಿಕೆ ತಾರತಮ್ಯದ ವಿರುದ್ದ ಪ್ರತಿಭಟನೆ

ಆರ್ ಟಿಇ ಸೀಟು ಹಂಚಿಕೆ ತಾರತಮ್ಯದ ವಿರುದ್ದ ಪ್ರತಿಭಟನೆ
ಪುತ್ತೂರು ಮಾರ್ಚ್ 15: ಆರ್.ಟಿ.ಇ ಕಾಯ್ದೆಯ ವ್ಯಾಪ್ತಿಯನ್ನು ಗ್ರಾಮ ಹಾಗೂ ವಾರ್ಡ್ ಗೆ ಸೀಮಿತಗೊಳಿಸಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿರುವ ಬಡ ಮಕ್ಕಳಿಗೆ ಇದರ ಪ್ರಯೋಜನ ಸಿಗುತ್ತಿಲ್ಲ ಎಂದು ಆರೋಪಿಸಿ ನಮ್ಮೂರು ನೆಕ್ಕಿಲಾಡಿ ಸಂಘಟನೆ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ ನಡೆಯಿತು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಆರ್.ಟಿ.ಇ ದಾಖಲಾತಿ ಪ್ರಕ್ರಿಯೆಯನ್ನು ಗ್ರಾಮ ಹಾಗೂ ವಾರ್ಡ್ ವ್ಯಾಪ್ತಿಯಿಂದ ತೆಗೆದು ತಾಲೂಕುವಾರು ನೀಡಬೇಕೆಂದು ಆಗ್ರಹಿಸಿದರು. ಎಲ್ಲಾ ಗ್ರಾಮಗಳಲ್ಲಿ ಅನುದಾನ ರಹಿತ ಶಾಲೆಗಳು ಇಲ್ಲದಿರುವುದರಿಂದ ಶಾಲೆ ಇಲ್ಲದ ಗ್ರಾಮದ ಜನ ಇನ್ನೊಂದು ಗ್ರಾಮದ ಶಾಲೆಗೆ ಅರ್ಜಿ ಹಾಕಲು ಅವಕಾಶವಿಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
