LATEST NEWS
ವಿದ್ಯುತ್ ವಿತರಣಾ ಕಂಪೆನಿಗಳ ಖಾಸಗೀಕರಣಕ್ಕೆ ವಿರೋಧ ಸಿಬ್ಬಂದಿಗಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ವಿದ್ಯುತ್ ವಿತರಣಾ ಕಂಪೆನಿಗಳ ಖಾಸಗೀಕರಣಕ್ಕೆ ವಿರೋಧ ಸಿಬ್ಬಂದಿಗಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಪುತ್ತೂರು ಜೂ 1: ವಿದ್ಯುತ್ ವಿತರಣಾ ಕಂಪೆನಿಗಳ ಖಾಸಗೀಕರಣದ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರಿನಲ್ಲಿ ಮೆಸ್ಕಾಂ ಶಾಖಾಧಿಕಾರಿ ಹಾಗೂ ಸಿಬ್ಬಂದಿಗಳಿಂದ ಕಪ್ಪು ಪಟ್ಟಿಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ.
ಭಾರತ ವಿದ್ಯುತ್ ಸಚಿವಾಲಯವು 2003ರ ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ತಂದು, ಪ್ರಸ್ತಾಪಿತ 2020ರಲ್ಲಿ ಎಲ್ಲಾ ವಿದ್ಯುತ್ ವಿತರಣಾ ಕಂಪೆನಿಗಳನ್ನು ಖಾಸಗೀಕರಣಗೊಳಿಸುವ ನೀತಿಯ ವಿರುದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ ನೀಡಿದ ಕರೆಗೆ ಬೆಂಬಲವಾಗಿ ಆಲಂಕಾರು ಮೆಸ್ಕಾಂ ಶಾಖಾ ಕಛೇರಿಯ ಮುಂಭಾಗದಲ್ಲಿ ಆಲಂಕಾರು ಮೆಸ್ಕಾ ಶಾಖಾಧಿಕಾರಿ ಜೋಸೆಪ್ ಗೊನ್ಸಾಲ್ವಿಸ್ ಹಾಗೂ ಸಿಬ್ಬಂದಿಗಳು ಸಾಂಕೇತಿಕವಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿ ಮೌನ ಪ್ರತಿಭಟನೆ ನಡೆಸಿದ
