Connect with us

BELTHANGADI

ಪ್ರತಿಭಟನಾ ಸಮಾವೇಶ :ವೇದಿಕೆ ಹತ್ತಲು ಯತ್ನಿಸಿದ ಸೌಜನ್ಯ ತಾಯಿಯನ್ನು ತಡೆದ ಪೊಲೀಸರು

Share Information

ಮಂಗಳೂರು, ಆಗಸ್ಟ್ 04: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನ ಮಾಡಲಾಗುತ್ತಿರುವ ವಿಚಾರದ ಹಿನ್ನೆಲೆ ಪ್ರತಿಭಟನಾ ಸಮಾವೇಶ ಇಂದು ನಡೆಯಿತು. ಈ ಪ್ರತಿಭಟನಾ ಸಭೆಯಲ್ಲಿ ವೇದಿಕೆ ಹತ್ತಲು ಪ್ರಯತ್ನಿಸಿದ ಸೌಜನ್ಯ ತಾಯಿ ಕುಸುಮಾವತಿಯನ್ನು ಪೊಲೀಸರು ತಡೆದಿದ್ದಾರೆ.

ಉಜಿರೆಯಲ್ಲಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದಿಂದ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ಮುಂಭಾಗದ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಟನಾ ಸಮಾವೇಶಕ್ಕೆ ಭಕ್ತರು ಆಗಮಿಸಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜೈಕಾರ ಕೂಗಿದ್ದಾರೆ.

ಈ ವೇಳೆ ಸೌಜನ್ಯ ತಾಯಿ ಕುಸುಮಾವತಿ ಜಸ್ಟೀಸ್ ಫಾಸ್ ಸೌಜನ್ಯ ಎಂದು ಭಿತ್ತಿಪತ್ರವನ್ನು ಹಿಡಿದು ತಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ವೇದಿಕೆ ಹತ್ತಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕುಸುಮಾವತಿ, ನಾವು ಒಂದು ನ್ಯಾಯ ಕೇಳೋದಕ್ಕಾಗಿ ಬಂದಿದ್ದೆವು. ಮಗಳ ಸಾವಿಗೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬಂದಿದ್ದೆವು. ಆದರೆ ನಮ್ಮನ್ನು ಸ್ಟೇಜ್ ಹತ್ತಲು ಬಿಡಲಿಲ್ಲ. ಮಾತ್ರವಲ್ಲದೇ ನನ್ನ ಮಗನ ಕಾಲರ್ ಅನ್ನು ಹಿಡಿದು ಇಳಿಸಿದರು. ಇದು ಧರ್ಮಸ್ಥಳದ ಧರ್ಮನಾ ಎಂದು ಪ್ರಶ್ನಿಸಿದರು.

ಸೌಜನ್ಯ ಪರವಾಗಿ ಅವರು ಹೋರಾಟ ಮಾಡುತ್ತಿಲ್ಲ. ಇದೆಲ್ಲಾ ನೆಪವಷ್ಟೇ. ನನ್ನ ಮಗಳ ಹೆಸರನ್ನು ಬಳಸಿ ಹೋರಾಟ ಮಾಡುತ್ತಿದ್ದಾರೆ ಹೊರತು ನನ್ನ ಮಗಳ ಪರವಾಗಿ ಅಲ್ಲ. ನಾವು ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರುತನಿಖೆ ಆಗಲೇ ಬೇಕು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಆಗಬೇಕು ಎಂದು ಕುಸುಮಾವತಿ ಆಕ್ರೋಶ ಹೊರಹಾಕಿದರು.


Share Information
Advertisement
Click to comment

You must be logged in to post a comment Login

Leave a Reply