Connect with us

DAKSHINA KANNADA

ದಲಿತ ಯುವತಿಗೆ ನ್ಯಾಯ ಕೇಳುವ ಮುಖಂಡನ ಮಗನಿಂದಲೇ ದಲಿತ ಯುವತಿಗೆ ಲೈಂಗಿಕ ಕಿರುಕುಳ….

ಪುತ್ತೂರು : ಉತ್ತರ ಪ್ರದೇಶದ ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಘಟನೆಯನ್ನು ಖಂಡಿಸಿ ಎಸ್​ಡಿಪಿಐ ಸಂಘಟನೆಯ ಮುಖಂಡನೊಬ್ಬ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಆತನ ಮಗ ದಲಿತ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.


ಮೊಹಮ್ಮದ್ ಪೈಝಲ್ ಬಂಧಿತ ಆರೋಪಿಯಾಗಿದ್ದು. ಈತ ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿ. ಪೈಝಲ್​ಗೆ ಆಂಧ್ರ​ ಮೂಲದ ಯುವತಿಯೊಬ್ಬಳು ಇನ್​ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಳು. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ದೈಹಿಕ ಸಂಬಂಧಕ್ಕೂ ಕಾರಣವಾಗಿತ್ತು ಎನ್ನಲಾಗಿದೆ. ಅಲ್ಲದೆ, ಯುವತಿಯ ಭಾವಚಿತ್ರಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ಕಿರುಕುಳ ನೀಡಿರುವು ಆರೋಪವೂ ಕೇಳಿಬಂದಿದೆ.


ಈ ಸಂಬಂಧ ಯುವತಿ ಆಂಧ್ರ ಪೊಲೀಸರಿಗೆ ದೂರು ನೀಡಿದ್ದಳು. ಹೀಗಾಗಿ ನಿನ್ನೆ ಪುತ್ತೂರಿಗೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇನ್ನೊಂದೆಡೆ ಪೈಝಲ್​ ತಂದೆ ಅಬ್ದುಲ್ ಹಮೀದ್ ಸಾಲ್ಮರ ಎಸ್​ಡಿಪಿಐ ಸಂಘಟನೆಯ ಮುಖಂಡನಾಗಿದ್ದು, ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಘಟನೆಯನ್ನು ಖಂಡಿಸಿ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದರು. ಇದರ ನಡುವೆ ಮಗನನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಿರುವುದು ಪೇಚಿಗೆ ಮುಜುಗರಕ್ಕೀಡುಮಾಡಿದೆ.