Connect with us

LATEST NEWS

ಪಾಕಿಸ್ತಾನದ ವಿರುದ್ದ ಅಪ್ಘಾನಿಸ್ತಾನದಲ್ಲಿ ಭಾರೀ ಪ್ರತಿಭಟನೆ…!!

ಕಾಬೂಲ್ : ತಾಲಿಬಾನ್ ಅಟ್ಟಹಾಸಕ್ಕೆ ಬೆನ್ನಲುಬಾಗಿರುವ ಪಾಕಿಸ್ತಾನದ ವಿರುದ್ದ ಇದೀಗ ಅಪ್ಘನ್ನರು ತಿರುಗಿ ಬಿದ್ದಿದ್ದು, ಪಾಕಿಸ್ತಾನದ ವಿರುದ್ದ ಸಾವಿರಾರು ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.


ಪಾಕ್ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಪುರಷರಿಗಿಂತ ಬಹುತೇಕ ಮಹಿಳೆಯರೇ ಪಾಲ್ಗೊಂಡಿದ್ದರು. ಪಾಕಿಸ್ತಾನದ ಐಎಸ್ಐ ನಿರ್ದೇಶಕ ತಂಗಿರು ಕಾಬೂಲ್ ನ ಅಧ್ಯಕ್ಷರ ಅರಮನೆ ಮುಂದೆ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಭಿತ್ತಿಫಲಕವನ್ನು ಹಿಡಿದು, ಪಾಕ್ ವಿರೋಧಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಸೆರೆನಾ ಹೋಟೆಲ್ ಕಡೆಗೆ ಹೊರಟ ಪ್ರತಿಭಟನಾಕಾರರು ಪಾಕ್ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ಸಾಗುವಾಗ ತಾಲಿಬಾನಿಗಳು ಗುಂಡು ಹಾರಿಸಿದ್ದಾರೆ.


ಇದಕ್ಕೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಆಫ್ಘಾನ್ನ ನೂರಾರರು ಮಹಿಳೆಯರು ಮತ್ತು ಪುರುಷರು ಭಿತ್ತಿಫಲವನ್ನು ಹಿಡಿದು, ಪಾಕ್ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಕಾಬುಲ್ ಬೀದಿಯಲ್ಲಿ ಮೆರವಣಿಗೆ ಹೊರಟಿರುವುದನ್ನು ಕಾಣಬಹುದಾಗಿದೆ. ಸ್ವಾತಂತ್ರ್ಯ ಬೇಕೆಂದು ಕರೆ ನೀಡಿದರು. ಡೆತ್ ಪಾಕಿಸ್ತಾನ, ಡೆತ್ ಐಎಸ್ಐ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ನಮಗೆ ಸ್ವತಂತ್ರ ಬೇಕೆಂದು ಧ್ವ ನಿಯೇರಿಸಿದರು. ಪಾಕಿಸ್ತಾನಕ್ಕಾಗಲಿ ಅಥವಾ ತಾಲಿಬಾನ್ಗಾಗಲಿ ಪಂಜಶೀರ್ ಮೇಲೆ ದಾಳಿ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಆಫ್ಘಾನ್
ಮಹಿಳೆಯೊಬ್ಬರು ಹೇಳಿದ್ದಾರೆ.

Advertisement
Click to comment

You must be logged in to post a comment Login

Leave a Reply