LATEST NEWS
ಥಾಯ್ಲೆಂಡ್ ನಲ್ಲಿ ಮೃತಪಟ್ಟ ಮಂಗಳೂರಿನ ಮಹಿಳಾ ಉದ್ಯಮಿ ಓಷಿನ್ ಪಿರೇರ
ಮಂಗಳೂರು ಎಪ್ರಿಲ್ 11: ಮಂಗಳೂರಿನ ಬೇಕಿಂಗ್ ಕಂಪೆನಿ ಮಾಲಕಿ ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರನ್ನು ನಗರದ ಗೋರಿಗುಡ್ಡೆ ನಿವಾಸಿ ಓಷಿನ್ ಪಿರೇರ (28) ಎಂದು ಗುರುತಿಸಲಾಗಿದೆ. ಇವರು ನಗರದ ಸೇಂಟ್ ಆಗ್ನೆಸ್ ಕಾಲೇಜು ಬಳಿ ಇರುವ ‘ಮಂಗಳೂರು ಬೇಕಿಂಗ್ ಕಂಪನಿ’ ರೆಸ್ಟೋರಂಟ್ ಒಡತಿಯಾಗಿದ್ದ ಅವರು ಉದಯೋನ್ಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.
ರಜೆ ಕಳೆಯಲು ಎರಡು ದಿನಗಳ ಹಿಂದಷ್ಟೇ ಅವರು ಥಾಯ್ಲೆಂಡ್‌ಗೆ ತೆರಳಿದ್ದರು ಎಂದು ತಿಳಿದು ಬಂದಿದೆ.