Connect with us

UDUPI

ಸ್ವೀಪ್ ಸಮಿತಿ ವತಿಯಿಂದ ಪ್ರೊಪೈಲ್ ಇಮೇಜ್ ಬಿಡುಗಡೆ

ಉಡುಪಿ, ಏಪ್ರಿಲ್ 5 : ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬAದಿಸಿದAತೆ, ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿಗೆ ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಯುವಜನತೆ ಸೇರಿದಂತೆ ಬಹುತೇಕ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿರುವ ಹಿನ್ನಲೆಯಲ್ಲಿ ಇವರನ್ನು ದೃಷ್ಠಿಯಲ್ಲಿಟ್ಟುಕೊಂಡು ಪ್ರೊಪೈಲ್ ಇಮೇಜ್‌ಗಳನ್ನು ಸಿದ್ದಪಡಿಸಲಾಗಿದೆ.


ಮತದಾನದ ಕುರಿತು ಜಾಗೃತಿ ಮೂಡಿಸಲು ಮತದಾನದ ದಿನವಾದ ಮೇ 10 ನ್ನು ಸಾರ್ವಜನಿಕರಿಗೆ ಸದಾ ನೆನಪು ಮಾಡುವಂತೆ, ಪ್ರೊಪೈಲ್ ಇಮೇಜ್ ಗಳನ್ನು ಸಿದ್ದಪಡಿಸಿದ್ದು, ಇವುಗಳನ್ನು ಮೊಬೈಲ್ ನ ಡಿಪಿಯಾಗಿ ಹಾಗೂ ಫೇಸ್ ಬುಕ್ ನಲ್ಲಿ ಸ್ಟಿಕರ್ ಆಗಿ ಬಳಸಲು ಅನುಕೂಲವಾಗುವಂತೆ ರಚಿಸಲಾಗಿದೆ.
ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಾದ ಸೈಂಟ್ ಮೇರಿಸ್ ದ್ವೀಪ, ಸಮುದ್ರ ತೀರ, ಕಾಪು ದೀಪ ಸ್ಥಂಭ, ಮರವಂತೆ , ಪಶ್ಚಿಮ ಘಟ್ಟಗಳನ್ನು ಹಿನ್ನಲೆಯಾಗಿ ಇಟ್ಟುಕೊಂಡು 8 ಕ್ಕೂ ಅಧಿಕ ಪ್ರೊಪೈಲ್ ಇಮೇಜ್ ಗಳನ್ನು ಅತ್ಯಂತ ಆಕರ್ಷಕವಾಗಿ ಸಿದ್ದಪಡಿಸಲಾಗಿದ್ದು, ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಇವುಗಳನ್ನು ಬಿಡುಗಡೆಗೊಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *