Connect with us

    DAKSHINA KANNADA

    ಶ್ರೀಕರ ಪ್ರಭು ಬಿಜೆಪಿ ಸೇರ್ಪಡೆಗೆ ಮೆಸೇಜ್ ತಂತ್ರ

    ಮಂಗಳೂರು,ಸೆಪ್ಟಂಬರ್ 22: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗೋದು ಸಾಮಾನ್ಯ. ತಮ್ಮ ನೆಚ್ಚಿನ ನಾಯಕನಿಗೆ ಟಿಕೆಟ್ ನೀಡಬೇಕು, ಜವಾಬ್ದಾರಿ ನೀಡಬೇಕು ಎನ್ನುವ ಲಾಭಿಗಳು ಹುಟ್ಟಿಕೊಳ್ಳೋದು ಇದೇ ಸಮಯದಲ್ಲಿ. ಅಂಥಹುದೇ ಒಂದು ಲಾಭಿ ಮೆಸೇಜ್ ಇದೀಗ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್ ಹಾಗೂ ಫೇಸ್ಪುಕ್ ನಲ್ಲಿ ಹರಿದಾಡುತ್ತಿದೆ.ಈ ಮೆಸೇಜ್ ಕಳೆದ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಆಗಿನ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ವ್ಯಕ್ತಿತ್ವ ಹರಣಕ್ಕೆ ಕುತಂತ್ರ ನಡೆಸಿದ್ದಾರೆ ಎನ್ನುವ ಕಾರಣಕ್ಕೆ ಪಕ್ಷದಿಂದ ಉಚ್ಛಾಟಿಸಲ್ಪಟ್ಟ ಮಂಗಳೂರಿನ ಶ್ರೀಕರ್ ಪ್ರಭು ಅವರಿಗೆ ಸಂಬಂಧಪಟ್ಟಿದ್ದು. ಶ್ರೀಕರ್ ಪ್ರಭು ಒಬ್ಬ ಯುವ ನಾಯಕ. ಮಂಗಳೂರು ನಗರ ಬಿಜೆಪಿ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಈ ನಾಯಕರ ಅವಿರತ ದುಡಿಮೆಯಿಂದಾಗಿ ಅಂದು ವಿಧಾನಸಭಾ ಕ್ಷೇತ್ರ ಹಾಗೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ತನ್ನ ಪಾರುಪತ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದು ಈ ನಾಯಕ ಬಿಜೆಪಿ ಪಕ್ಷಕ್ಕೆ ಬೇಡವಾಗಿದ್ದಾರೆ. ಬಿಜೆಪಿ ಪಕ್ಷದಿಂದ ಉಚ್ಛಾಟಿತರಾದಾಗ ಬೇರೆ ಯಾವುದೋ ಪಕ್ಷಕ್ಕೆ ಹೋಗುವ ತಾಕತ್ತು ಅವರಲ್ಲಿತ್ತಾದರೂ, ಬಿಜೆಪಿಯನ್ನು ಅವರು ಇಂದಿಗೂ ಬಿಟ್ಟು ಹೋಗಿಲ್ಲ. ಬಿಜೆಪಿ ಪಕ್ಷದ ಒಳಗಿನ ಕೆಲವರ ಕುತಂತ್ರಕ್ಕೆ ಬಲಿಪಶುವಾಗಿ ಶ್ರೀಕರ ಪ್ರಭು ಇಂದು ಬಿಜೆಪಿಯಿಂದ ದೂರ ಉಳಿಯುವಂತಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ಟರ ನೆಚ್ಚಿನ ಶಿಷ್ಯನಾಗಿರುವ ಶ್ರಿಕರ್ ಪ್ರಭುವಿನ ಒಳ್ಳೆಯ ಗುಣಗಳ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಬೇಕಿದೆ. ಅವರು ತಮ್ಮ ಮೌನ ಮುರಿದು ತನ್ನ ಶಿಷ್ಯನ ಜೊತೆ ನಿಲ್ಲಬೇಕಿದೆ ಎಂಬಿತ್ಯಾದಿ ಮಾಹಿತಿಗಳು ಈ ಮೆಸೇಜ್ ನಲ್ಲಿದೆ. ತನ್ನ ಪರವಾಗಿ ಹರಡುತ್ತಿರುವ ಮೆಸೇಜ್ ಗಳ ಬಗ್ಗೆ ಶ್ರೀಕರ್ ಪ್ರಭುವಿಗೆ ಅರಿವಿದೆಯೋ ಅಥವಾ ಆ ಮೆಸೇಜ್ ಅವರ ಮೂಲಕವೇ ಪಾಸ್ ಆಗಿದೆಯೋ ಎನ್ನುವುದರ ಬಗ್ಗೆ ಇದೀಗ ಚರ್ಚೆಗಳು ಬರಪೂರ ನಡೆಯುತ್ತಿದೆ. ತಮ್ಮನ್ನು ತಾವು ಬಿಂಬಿಸಿಕೊಳ್ಳುವುದಕ್ಕಾಗಿ ಇಂಥಹ ತಂತ್ರವನ್ನು ಬಳಸುವುದು ಸಾಮಾನ್ಯ ಎನ್ನುವ ಕುಹಕದ ಮಾತುಗಳೂ ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply