DAKSHINA KANNADA
ಮಂಗಳೂರಿನಲ್ಲೂ ಮೊಳಗಿದೆ ಪಾಕಿಸ್ತಾನದ ಜೈಕಾರ, ಕಾಂಗ್ರೇಸ್ ವಿಜಯೋತ್ಸವ ನೀಡಿತು ಇದಕ್ಕೆ ಸಹಕಾರ
ಮಂಗಳೂರಿನಲ್ಲೂ ಮೊಳಗಿದೆ ಪಾಕಿಸ್ತಾನದ ಜೈಕಾರ, ಕಾಂಗ್ರೇಸ್ ವಿಜಯೋತ್ಸವ ನೀಡಿತು ಇದಕ್ಕೆ ಸಹಕಾರ
ಮಂಗಳೂರು, ಮೇ 20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತು ಪಡಿಸದೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ರಾಜ್ಯದೆಲ್ಲೆಡೆ ಕಾಂಗ್ರೇಸ್ ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೇಸ್ ಕಛೇರಿ ಮುಂಭಾಗದಲ್ಲೂ ಶನಿವಾರದಂದು ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ.
ವಿಜಯೋತ್ಸವದ ಸಂದರ್ಭದಲ್ಲಿ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರಿಗೂ ಜೈಕಾರ ಹಾಕಲಾಗಿತ್ತು.
ಈ ನಡುವೆ ಕಾಂಗ್ರೇಸ್ ಕಾರ್ಯಕರ್ತರು ಪಾಕಿಸ್ತಾನಕ್ಕೂ ಜೈಕಾರ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಪಾಕಿಸ್ತಾನಕ್ಕೆ ಜೈಕಾರ ಹಾಕುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಬಹುಮತ ಸಾಬೀತು ಪಡಿಸಲಾಗದೆ ಯಡಿಯೂರಪ್ಪ ರಾಜೀನಾಮೆ ನೀಡಿದ ಹಾಗೂ ರಾಜ್ಯದಲ್ಲಿ ಕಾಂಗ್ರೇಸ್-ಜೆಡಿಎಸ್ ಅಧಿಕಾರಕ್ಕೆ ಬರುವ ಹಿನ್ನಲೆಯಲ್ಲಿ ಕಾಂಗ್ರೇಸ್ ಪಕ್ಷ ವಿಜಯೋತ್ಸವ ನಡೆಸಿರುವುದು ಒಪ್ಪಿಕೊಳ್ಳುವ ವಿಚಾರವಾಗಿದೆ.
ಆದರೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಜೆ.ಆರ್.ಲೋಬೋ ಜೊತೆಗೆ ಪಾಕಿಸ್ತಾನಕ್ಕೂ ಜೈಕಾರ ಕೂಗಿದ್ದು ಯಾಕೆ ಎನ್ನುವುದನ್ನು ಕಾಂಗ್ರೇಸ್ ಮುಖಂಡರೇ ಸ್ಪಷ್ಟಪಡಿಸಬೇಕಿದೆ.
VIDEO