DAKSHINA KANNADA
ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕರ ನಡುವೆ ಹೊಡೆದಾಟ

ವಿಟ್ಲ ಡಿಸೆಂಬರ್ 09: ಖಾಸಗಿ ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಎರಡು ಬಸ್ ಚಾಲಕರು ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಘಟನೆ ವಿಟ್ಲದ ಖಾಸಗಿ ಬಸ್ಸುನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದ್ದು, ಚಾಲಕರನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದಿನ ಗಲಾಟೆಗೂ ಮೊದಲು ಕಳೆದ ಎರಡು ದಿನಗಳ ಹಿಂದೆ ಎರಡು ಖಾಸಗಿ ಬಸ್ ಚಾಲಕರ ನಡುವೆ ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಟ ನಡೆದಿತ್ತು ಎಂದು ತಿಳಿದು ಬಂದಿದ್ದು, ಇಂದು ಮತ್ತೆ ಅದೇ ವಿಚಾರಕ್ಕೆ ಬೆಳಗ್ಗೆ ಮಹೇಶ್ ಮತ್ತು ಮಣಿಕಂಠ ಎಂಬ ಬಸ್ ನ ಚಾಲಕರು ಬಸ್ ನಿಲ್ದಾಣದಲ್ಲಿ ಹೊಡೆದಾಟಕ್ಕೆ ಇಳಿದಿದ್ದರು. ಮಾಹಿತಿ ಅರಿತು ಸ್ಥಳಕ್ಕೆಆಗಮಿಸಿದ ವಿಟ್ಲ ಠಾಣಾ ಪೊಲೀಸರು ಇಬ್ಬರು ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
