Connect with us

    LATEST NEWS

    ಅಯೋಧ್ಯೆ ರಾಮಂದಿರದ ‘ಸೂರ್ಯ ತಿಲಕ’ದ ಕ್ಷಣ ಕಣ್ತುಂಬಿಕೊಂಡ ಪ್ರಧಾನಿ ಮೋದಿ..!

    ನವದೆಹಲಿ: ಬಿಡುವಿಲ್ಲದ ಚುನಾವಣಾ ಪ್ರಚಾರದ ಮಧ್ಯೆಯೂ ರಾಮ ನವಮಿಯ ಪುಣ್ಯ ದಿನದಂದು ಸೂರ್ಯರಶ್ಮಿ ಬಾಲರಾಮನ ಹಣೆಯನ್ನು ಸ್ಪರ್ಶಿಸುವ ಅಪೂರ್ವ ಕ್ಷಣವನ್ನು ಪ್ರಧಾನಿ ಮೋದಿ ಅವರು ವೀಕ್ಷಿಸಿ ಕಣ್ತುಂಬಿಕೊಂಡಿದ್ದಾರೆ.

    500 ವರ್ಷಗಳ ನಂತರ ಅಯೋಧ್ಯೆಯ ಶ್ರೀರಾಮನ (Ayodhya Ram Mandir) ಜನ್ಮಸ್ಥಳದಲ್ಲಿ ಈ ಐತಿಹಾಸಿಕ ಪುಣ್ಯದ ಕ್ಷಣ ನಡೆದಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ಮೋದಿ ತೊಡಗಿಸಿಕೊಂಡಿದ್ದು ಸದ್ಯ ಅಸ್ಸಾಂ ಪ್ರವಾಸದಲ್ಲಿ ಪ್ರಧಾನಿ ಮೋದಿ ಇದ್ದಾರೆ. ಇಂದು ಅಸ್ಸಾಂನ ನಲ್ಬರಿಯಲ್ಲಿ ನಡೆದ ಬಿಜೆಪಿ ಪಕ್ಷದ ಚುನಾವಣಾ ರಾಲಿಯಲ್ಲಿ ಭಾಗವಹಿಸಿದ್ದರು. ಆದರೆ ಬಿಡುವಿಲ್ಲದ ಪ್ರಚಾರದ ಮಧ್ಯೆಯೂ ಅಯೋಧ್ಯೆಯಲ್ಲಿ ನಡೆದ ಸೂರ್ಯರಶ್ಮಿ ಬಾಲರಾಮನ ಹಣೆಯನ್ನು ಸ್ಪರ್ಶಿಸುವ ಅಪೂರ್ವ ಕ್ಷಣವನ್ನು ವಿಡಿಯೋ ಮೂಲಕ ನೋಡಿದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನಾನು ನಲ್ಬರಿಯಲ್ಲಿ ನಡೆದ ಚುನಾವಣಾ ರಾಲಿಯ ನಂತರ ರಾಮ್ ಲಲ್ಲಾನನ್ನು ಸೂರ್ಯ ತಿಲಕ ಸ್ಪರ್ಶಿಸುವ ಕ್ಷಣವನ್ನು ವೀಕ್ಷಿಸಿದೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಕ್ಷಣ. ಅಯೋಧ್ಯೆಯ ರಾಮನವಮಿಯು ಐತಿಹಾಸಿಕವಾಗಿದೆ. ಈ ಸೂರ್ಯ ತಿಲಕ ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರವನ್ನು ಏರಲು ಪ್ರೇರೇಪಿಸಲಿ ಎಂದು ಹೇಳಿದ್ದಾರೆ.

    ಶ್ರೀರಾಮನ ಹಣೆಗೆ ಸೂರ್ಯರಶ್ಮಿಯ ಚುಂಬನ
    ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಇಂದು ಸಾವಿರಾರು ಭಕ್ತರು ಭಕ್ತಿ ಮಿಂದೇಳುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ರಾಮನವಮಿ ಹಿನ್ನೆಲೆ ವಿಶೇಷ ಅಲಂಕಾರ ಮತ್ತು ಶೃಂಗಾರದಲ್ಲಿ ಬಾಲರಾಮನ ವಿಗ್ರಹ ಕಂಗೊಳಿಸುತ್ತಿತ್ತು. ಬಾಲರಾಮನ ವಿಗ್ರಹವನ್ನು ನೋಡುತ್ತಿದ್ದಂತೆ ಭಕ್ತರು ಭಕ್ತಪರವಶದಲ್ಲಿ ಮಿಂದು ಧನ್ಯರಾದರು. ಬಾಲರಾಮನ ಹಣೆಗೆ ಸೂರ್ಯನ ಅಭಿಷೇಕವನ್ನು ನಂಬಿಕೆ ಮತ್ತು ವಿಜ್ಞಾನದ ಸಂಗಮದೊಂದಿಗೆ ಮಾಡಲಾಗಿದ್ದು, ಸೂರ್ಯರಶ್ಮಿ ಸ್ಪರ್ಶವಾಗುತ್ತಿದ್ದಂತೆ ರಾಮನ ಹಣೆಯು ಸೂರ್ಯನ ಕಿರಣಗಳಿಂದ ಹೊಳೆಯಿತು. 500 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸೂರ್ಯಾಭಿಷೇಕ ನಡೆದಿದೆ ಅನ್ನೋದು ವಿಶೇಷವಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *