Connect with us

    KARNATAKA

    ಪ್ರಿ ವೆಡ್ಡಿಂಗ್ ಶೂಟ್ ನಲ್ಲಿ ಯಕ್ಷಗಾನ – ಭರತ ನಾಟ್ಯದ ಸಮ್ಮಿಳಿತ, ಶಿರಸಿಯ ನವಜೋಡಿಗೆ ಶುಭಾಷಯಗಳ ಮಳೆ..!!

    ಶಿರಸಿ : ಈಗಿನ ಕಾಲದಲ್ಲಿ ಪ್ರಿ ವೆಡ್ಡಿಂಗ್ ಶೂಟ್ (pre wedding shoot) ಯಾವ ರೀತಿ ಇರುತ್ತೆ ಅಂತ ನಮಗೆ ನಿಮಗೆಲ್ಲಾ ಗೊತ್ತೇ ಇದೆ. ಅನೇಕ ಕಸರತ್ತುಗಳನ್ನು ಮಾಡಿ ಪ್ರೀ ವೆಡ್ಡಿಂಗ್ ಶೂಟ್ ಮಾಡುವ ಈ ಕಾಲದಲ್ಲಿ ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಪ್ರೀ ವೆಡ್ಡಿಂಗ್  ಶೂಟ್(pre wedding shoot) ಮಾಡಿ  ಜೋಡಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


    ಉತ್ತರಕನ್ನಡ ಹಾಗೂ ಶಿವಮೊಗ್ಗ ಮೂಲದ ಜೋಡಿಯೊಂದು ಯಕ್ಷಗಾನ ಹಾಗೂ ಭರತನಾಟ್ಯವನ್ನು ಬಿಂಬಿಸುವ ನೃತ್ಯರೂಪಕವನ್ನು ಪ್ರೀ ವೆಡ್ಡಿಂಗ್ ಶೂಟ್ ಮಾಡಿದ್ದು, ನೆಟ್ಟಿಗರು ಅವರ ಸಾಂಸ್ಕೃತಿಕ ಚಿಂತನೆಗೆ ಹುಬ್ಬೇರಿಸಿದ್ದು ಶಹಭಾಸ್​ ಅಂದಿದ್ದಾರೆ.  ಜೋಗ ಸಮೀಪದ ಕಾಳಮಂಜಿಯವರಾದ ಚಂದನ್ ಕಲಾಹಂಸ ಹಾಗೂ ಯಲ್ಲಾಪುರ ಸಮೀಪದ ಉಮ್ಮಚಗಿಯ ಭಾರ್ಗವಿ ಬಿ.ಎಚ್ ಈ ವಿಡಿಯೋ ಶೂಟ್‌ನಲ್ಲಿ ಭಾಗಿಯಾಗಿದ್ದಾರೆ. ಭಾರ್ಗವಿ ಅವರು ಭರತನಾಟ್ಯದಲ್ಲೇ ವಿದ್ವತ್ ಪೂರೈಸಿದ್ದು, ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಕೂಡ ಮುಗಿಸಿದ್ದಾರೆ. ಹಾಗೆಯೇ ಎಂ.ಕಾಂ. ಕೂಡಾ ಪೂರೈಸಿರುವ ಭಾರ್ಗವಿ ಖಾಸಗಿ ಕಂಪನಿಯೊಂದರಲ್ಲಿ ಸೀನಿಯರ್ ಎಕ್ಸಿಕ್ಯುಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

     

    ಅಂತೆಯೇ ಬಿ.ಕಾಂ, ಎಂ.ಎ ಪದವೀಧರರಾದ ಚಂದನ್ ಕಲಾಹಂಸ ಬೆಂಗಳೂರಿನ ವಿಜಯನಗರದಲ್ಲಿ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ವೆಬ್ ಡಿಸೈನ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆ ನಡೆಸುತ್ತಿದ್ದಾರೆ. ಎಳವೆಯಲ್ಲಿ ಯಕ್ಷಗಾನ ಕಲಿತಿದ್ದ ಇವರು ತಮ್ಮ ಆಸಕ್ತಿಗಾಗಿ ಈ ವಿಡಿಯೋ ಮಾಡಿದ್ದಾಗಿ  ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ. ನ.14 ರಂದು ಶಿರಸಿ ಸಮೀಪದ ಕೊಳಗಿಬೀಸ್​ನಲ್ಲಿ ಹಸೆಮಣೆ ಏರಲಿರುವ ನವಜೋಡಿಗೆ ನೆಟ್ಟಿಗರು ಶುಭಾಶಯಗಳ ಹೊಳೆಯನ್ನೇ ಹರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply