DAKSHINA KANNADA
ಮೆಕ್ಕಾ ಭೇಟಿ ನೆಪದಲ್ಲಿ ಸೌದಿ ಅರೇಬಿಯಾದಲ್ಲಿ ಕಾಂಗ್ರೇಸ್ ಪ್ರಚಾರ ಸಭೆ ನಡೆಸಿದ ಮೊಯಿದೀನ್ ಬಾವಾ
ಮೆಕ್ಕಾ ಭೇಟಿ ನೆಪದಲ್ಲಿ ಸೌದಿ ಅರೇಬಿಯಾದಲ್ಲಿ ಕಾಂಗ್ರೇಸ್ ಪ್ರಚಾರ ಸಭೆ ನಡೆಸಿದ ಮೊಯಿದೀನ್ ಬಾವಾ
ಮಂಗಳೂರು, ಎಪ್ರಿಲ್ 7: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ತನ್ನ ಕ್ಷೇತ್ರ ಬಿಟ್ಟು, ಸಾಗರದಾಜೆಯ ಕೊಲ್ಲಿ ರಾಷ್ಟ್ರಗಳಲ್ಲೂ ತನ್ನ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.
ಕರಾವಳಿ ಮೂಲಭ ಸಾಕಷ್ಟು ನಿವಾಸಿಗಳು ಸೌದಿ ಅರೇಬಿಯಾ, ಕುವೈಟ್, ಬಹೆರೈನ್, ಕತಾರ್, ದುಬೈ ಪ್ರದೇಶಗಳಲ್ಲಿದ್ದು, ಆ ಭಾಗದಲ್ಲಿರುವ ಅನಿವಾಸಿ ಭಾರತೀಯರ ಮತಯಾಚನೆಗಾಗಿ ಮೊಯಿದೀನ್ ಬಾವಾ ಸಭೆಯನ್ನೂ ಅಲ್ಲಿ ನಡೆಸಿದ್ದಾರೆ.
ಕಾಂಗ್ರೇಸ್ ಪಕ್ಷದ ಬ್ಯಾನರ್, ಬಂಟಿಂಗ್ಸ್ ಮೂಲಕ ನಡೆದ ಈ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಮೊಯಿದೀನ್ ಬಾವಾ ಆ ಭಾಗದಲ್ಲಿರುವ ಕರಾವಳಿಯ ಜನರಿಗೆ ಯಾವುದೇ ರೀತಿಯ ಸಹಾಯಕ್ಕೂ ತಾನು ಸಿದ್ಧನಿದ್ದೇನೆ ಎನ್ನುವ ಭರವಸೆಯನ್ನೂ ನೀಡಿದ್ದಾರೆ.
ಮೊಯಿದೀನ್ ಬಾವಾ ಪರವಾಗಿ ಮತ ಹಾಕಲು ಅನಿವಾಸಿ ಭಾರತೀಯರಿಗೆ ಟಿಕೆಟ್ ವ್ಯವಸ್ಥೆ ಮಾಡುವ ಆಡಿಯೋ ಕ್ಲಿಪಿಂಗ್ ಹರಿದಾಡುತ್ತಿದ್ದು, ಇದೀಗ ಸೌದಿ ಅರೇಬಿಯಾದಲ್ಲೂ ಕಾಂಗ್ರೇಸ್ ಸಭೆ ನಡೆಸಿ ಮತಯಾಚಿಸುವ ಮೂಲಕ ಆ ಅಡಿಯೋ ಕ್ಲಿಪಿಂಗ್ ನಲ್ಲಿರುವ ವಿಚಾರಗಳು ನಿಜ ಎನ್ನುವುದನ್ನು ತೋರಿಸಿಕೊಟ್ಟಿದೆ.
ಮೊಯಿದೀನ್ ಬಾವಾ ಸ್ಪರ್ಧಿಸುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಈ ಕಾರಣಕ್ಕಾಗಿಯೇ ಮೊಯಿದೀನ್ ಬಾವಾ ವಿದೇಶಕ್ಕೂ ಹಾರಿ ತನ್ನ ಪರ ಪ್ರಚಾರ ನಡೆಸುತ್ತಿದ್ದಾರೆ.
ವಿದೇಶದಲ್ಲಿ ಕಾಂಗ್ರೇಸ್ ಬ್ಯಾನರ್, ಬಂಟಿಂಗ್ಸ್ ಹಾಕಿ ಸಭೆ ನಡೆಸಿದ್ದು ಮಾತ್ರವಲ್ಲದೆ, ಅಲ್ಲಿ ಸೇರಿದ ಜನತೆಗೆ ಆಶ್ವಾಸನೆಯನ್ನೂ ನೀಡಿದ ಕಾರಣಕ್ಕಾಗಿ ಮೊಯಿದೀನ್ ಬಾವಾ ವಿರುದ್ಧ ನೀತಿ ಸಂಹಿತಿಯಡಿ ಪ್ರಕರಣ ದಾಖಲಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.