Connect with us

DAKSHINA KANNADA

ಸೌಜನ್ಯ ಪ್ರಕರಣದ ನೈಜ ಆರೋಪಿಗಳ ಶಿಕ್ಷೆಗೆ ಪ್ರಾರ್ಥನೆ- ಕುಮಾರಧಾರದಿಂದ ಕುಕ್ಕೆ ದೇಗುಲದವರೆಗೆ ಪಾದಯಾತ್ರೆ..!

ಸೌಜನ್ಯ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ಹಾಗೂ ಮರು ತನಿಖೆಗೆ ಒತ್ತಾಯಿಸಿ ಇಂದು ಸುಬ್ರಹ್ಮಣ್ಯದ ಕುಮಾರಧಾರ ಬಳಿಯಿಂದ ದೇವಸ್ಥಾನದ ವರೆಗೆ ಮೌನ ಮೆರವಣಿಗೆ ಆಯೋಜಿಸಲಾಗಿತ್ತು.
ಕಡಬ: ಸೌಜನ್ಯ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ಹಾಗೂ ಮರು ತನಿಖೆಗೆ ಒತ್ತಾಯಿಸಿ ಇಂದು ಸುಬ್ರಹ್ಮಣ್ಯದ ಕುಮಾರಧಾರ ಬಳಿಯಿಂದ ದೇವಸ್ಥಾನದ ವರೆಗೆ ಮೌನ ಮೆರವಣಿಗೆ ಆಯೋಜಿಸಲಾಗಿತ್ತು.


ಹೋರಾಟ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಹಮ್ಮಿಕೊಂಡ ಬೀ ಪಾದಯಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಕುಮಾರಧಾರ ಬಳಿಯಿಂದ ಆರಂಭವಾದ ಪಾದಯಾತ್ರೆ ದೇವಸ್ಥಾನದವರೆಗೆ ಸಾಗಿ ಅಲ್ಲಿ ಪ್ರಕರಣದ ನೈಜ ಆರೋಪಿಗಳಿಗೆ ಶಿಕ್ಷೆ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಸೌಜನ್ಯ ಪರ ಹೋರಾಟದಲ್ಲಿ ಮೊದಲ ದಿನದಿಂದಲೂ ಮುಂಚೂಣಿಯಲ್ಲಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ಮೊದಲಾದವರು ಭಾಗವಹಿಸಿದ್ದರು.

ಸುಬ್ರಹ್ಮಣ್ಯ ರೋಟರಿ ಕ್ಲಬ್ ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ಜೆಸಿಐ ಸುಬ್ರಹ್ಮಣ್ಯ, ಬಿಎಂಎಸ್ ಆಟೋ ಚಾಲಕ ಮಾಲಕ ಸಂಘ ಸುಬ್ರಹ್ಮಣ್ಯ, ಕುಕ್ಕೇ ಶ್ರೀ ಆಟೋ ಚಾಲಕ ಮಾಲಕ ಸಂಘ, ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ ಮಾಲಕ ಸಂಘ, ಸಂಜೀವಿನಿ ಒಕ್ಕೂಟ, ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ಸುಬ್ರಹ್ಮಣ್ಯ ವರ್ತಕರ ಸಂಘ, ಗೌಡ ಸಮಿತಿ ಸುಬ್ರಹ್ಮಣ್ಯ ವಲಯ ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತಿನಿಧಿಗಳು ಮತ್ತು ಸ್ಥಳೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಸಮಿತಿ ಹೋರಾಟ ಸಮಿತಿಯ ಡಾ.ರವಿ ಕಕ್ಕೆ ಪದವು,ಗೋಪಾಲ ಎಣ್ಣೆಮಜಲು, ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ ಗುರುಪ್ರಸಾದ್ ಮೇಲ್ನಾಡ್, ಸತೀಶ್.ಕೆ.ಪಿ. ಕೊಮ್ಮೆಮನೆ, ದಿನೇಶ್ ಶಿರಾಡಿ, ವಿವೇಕಾನಂದ ದೇವರಗದ್ದೆ, ತಿಲಕ್ ಎ.ಎ. ,ಭಾರತಿ ದಿನೇಶ್, ಶೇಖರ್ ಆಗೋಲಿಕಜೆ ಮೊದಲಾದವರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *