DAKSHINA KANNADA
ಕರ್ನಾಟಕದಲ್ಲಿ ಕ್ರಿಮಿನಲ್ ಗಳ ಮೆರವಣಿಗೆ ನಡೆಯುತ್ತಿದೆ- ಪ್ರತಾಪ್ ಸಿಂಹ

ಕರ್ನಾಟಕದಲ್ಲಿ ಕ್ರಿಮಿನಲ್ ಗಳ ಮೆರವಣಿಗೆ ನಡೆಯುತ್ತಿದೆ- ಪ್ರತಾಪ್ ಸಿಂಹ
ಸುಳ್ಯ ಮಾರ್ಚ್ 4: ಉತ್ತರಪ್ರದೇಶದಲ್ಲಿ ಕ್ರಿಮಿನಲ್ ಗಳು ಬೇಲ್ ಪಡೆದು ಹೊರಗೆ ಬರಲು ಹೆದರುತ್ತಿದ್ದರೆ,ಕರ್ನಾಟಕದಲ್ಲಿ ಕ್ರಿಮಿನಲ್ ಗಳನ್ನು ಮೆರವಣಿಗೆಯ ಮೂಲಕ ಕರೆ ತರುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುಳ್ಯದಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯ ಸಾರ್ವಜನಿಕ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಎಸ್.ಡಿ.ಪಿ.ಐ ಹಾಗೂ ಪೋಪ್ಯುಲರ್ ಫ್ರಂಟ್ ಇಂದು ದೇಶಕ್ಕೇ ಮಾರಕವಾಗಿ ಪರಿಣಮಿಸುತ್ತಿದೆ. ರಾಜ್ಯದಲ್ಲಿ ನಡೆದ ಹಿಂದೂ ಸಂಘಟನೆಗಳ ಹತ್ಯೆಯ ಹಿಂದೆ ಈ ಸಂಘಟನೆಗಳ ನೇರ ಕೈವಾಡವಿದೆ.

ಆದರೆ ರಾಜ್ಯ ಸರಕಾರ ಈ ಸಂಘಟನೆಗಳ ಮೇಲಿರುವ 175 ಕೇಸುಗಳನ್ನು ಹಿಂಪಡೆಯುವ ಮೂಲಕ ಈ ಸಂಘಟನೆಗಳು ನಡೆಸುತ್ತಿರುವ ದುಷ್ಕೃತ್ಯಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.ಎಲ್ಲಾ ಧರ್ಮವೂ ಒಂದೇ ಎಂದು ಸಾರುವ ಧರ್ಮವೊಂದಿದ್ದರೆ ಹಿಂದು ಧರ್ಮವಾಗಿದ್ದು, ಕುರಾನ್ ಹಾಗೂ ಬೈಬಲ್ ನಲ್ಲಿ ಎಲ್ಲರೂ ಒಂದೇ ಎಂದು ಸಾರುವ ಒಂದೇ ಒಂದು ವಾಕ್ಯ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.