LATEST NEWS
ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್ – ಹಣಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ – ಸುನಿಲ್ ಕುಮಾರ್

ಕಾರ್ಕಳ ಮೇ 15: ಪ್ರಮೋದ್ ಮುತಾಲಿಕ್ ಒಬ್ಬ ದೊಡ್ಡ ಡೀಲ್ ಮಾಸ್ಟರ್ ಹಣಕ್ಕಾಗಿ ಏನು ಬೇಕಾದರೂ ಮಾಡ್ತಾರೆ. ಹಣಕ್ಕಾಗಿ ಪ್ರಮೋದ್ ಮುತಾಲಿಕ್ ಹಿಂದೂಗಳನ್ನು ಕೊಲೆ ಮಾಡುತ್ತಾರೆ ಎಂದು ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಶ್ರೀರಾಮ ಸೇನೆ ಸಂಸ್ಥಾಪಕ ಮುತಾಲಿಕ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕಾರ್ಕಳ ಬಿಜೆಪಿ ವತಿಯಿಂದ ರವಿವಾರ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಹಾಗೂ ಪ್ರಮೋದ್ ಮುತಾಲಿಕ್ ವಿರುದ್ಧ ಸುನಿಲ್ ಕುಮಾರ್ ತನ್ನ 20 ನಿಮಿಷಗಳ ಭಾಷಣದಲ್ಲಿ ಆರೋಪಗಳ ಸುರಿಮಳೆಯನ್ನೇ ಸುರಿಸಿದರು. ಪ್ರಮೋದ್ ಮುತಾಲಿಕ್ ಕಾಂಗ್ರೇಸ್ ನ ಬಿ ಟೀಮ್, ಪ್ರತಿ ಚುನಾವಣೆಯಲ್ಲಿ ಡೀಲ್ ಮಾಡೊದೇ ಕೆಲಸ ಅವರಿಗೆ , ನಾನು 10 ಬಾರಿ ಹೆಳ್ತೇನೇ ಪ್ರಮೋದ್ ಮುತಾಲಿಕ್ ದೊಡ್ಡ ಡೀಲ್ ಮಾಸ್ಟರ್ ಎಂದು ಸುನಿಲ್ ಕುಮಾರ್ ಮುತಾಲಿಕ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನೀವು ತೆಗೆದ ಪೋಟೋದಷ್ಟು ವೋಟ್ ಕೂಡ ನಿಮಗೆ ಸಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.

ಪ್ರಮೋದ್ ಮುತಾಲಿಕ್ ಅವರ ಟೈಗರ್ ಗ್ಯಾಂಗ್ ಹಣಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆ ಮಾಡಿದೆ, ಹತ್ಯೆಯ ಟೈಗರ್ ಗ್ಯಾಂಗ್ ಇಂದಿಗೂ ಗುಲ್ಬರ್ಗ ಜೈಲಿನಲ್ಲಿದ್ದಾರೆ. ಚುನಾವಣೆ ನೆಪದಲ್ಲಿ ಎಷ್ಟು ಹಣ ವಸೂಲಿ ಮಾಡಿದ್ದೀರಿ ಎಂದು ಗೊತ್ತಿದೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡುತ್ತೇನೆ ಎಂದರು.