LATEST NEWS
7 ಬಾರಿ ಪಕ್ಷಾಂತರ ಮಾಡಿರುವ ಸಿದ್ದರಾಮಯ್ಯ ನನ್ನನ್ನು ಪಕ್ಷಾಂತರಿ ಎಂದು ಕರೆದಿದ್ದು ವಿಪರ್ಯಾಸ
ಉಡುಪಿ ಜನವರಿ 27 : ಇಲ್ಲಿಯವರೆಗೆ 7 ಬಾರಿ ಪಕ್ಷಾಂತರ ಮಾಡಿರುವ ಸಿದ್ದರಾಮಯ್ಯ ನನ್ನನ್ನು ಪಕ್ಷಾಂತರಿ ಎಂದು ಕರೆದಿದ್ದು ವಿಪರ್ಯಾಸ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್ ಕಾಂಗ್ರೇಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ವಾಗ್ದಾಳಿಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಈವರೆಗೆ ಏಳು ಬಾರಿ ಪಕ್ಷವನ್ನು ಬದಲಿಸಿರುವ ದೊಡ್ಡ ಪಕ್ಷಾಂತರಿ. ನಾನು ಹುಟ್ಟಿನಿಂದ ಕಾಂಗ್ರೆಸ್ ಆಗಿದ್ದು ಈಗ ಎಂಟು ತಿಂಗಳ ಹಿಂದೆ ಬಿಜೆಪಿ ಸೇರಿದ್ದೇನೆ ಎಂದರು. ಬೇರೆ ಪಕ್ಷದಲ್ಲಿ ಅಧಿಕಾರ ವಹಿಸಿದವರು ಕಾಂಗ್ರೆಸ್ ಗೆ ಬರಬೇಡಿ ಎಂದು ಘೋಷಿಸಿ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಗೆ ಪ್ರಮೋದ್ ಮಧ್ವರಾಜ್ ಸವಾಲು ಹಾಕಿದ ಅವರು, ದೇಶದಲ್ಲಿ ಪಕ್ಷಾಂತರ ಇತ್ತೀಚಿನ ವಿದ್ಯಾಮಾನವಲ್ಲ. ಸನ್ನಿವೇಶಕ್ಕೆ ಅನುಗುಣವಾಗಿ ದೇಶದಲ್ಲಿ ಪಕ್ಷಾಂತರ ಸಾಮಾನ್ಯ ಎಂದರು.
ನನ್ನನ್ನು ಅಸಾಮಿ, ಗಿರಾಗಿ ಅಂತ ಏಕವಚನದಲ್ಲಿ ಕರೆದಿದ್ದಾರೆ. ನಾನು ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿ ಮಂತ್ರಿಯಾಗಿದ್ದೆ. ನನ್ನನ್ನೇ ಹೀಗೆ ಕರೆದವರು ಜನಸಾಮಾನ್ಯರ ಬಗ್ಗೆ ಹೇಗೆ ಮಾತನಾಡಬಹುದು? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ವಿರುದ್ಧ ಕೆಟ್ಟ ಮಾತನಾಡಲು ಎಲ್ಲರಿಗೂ ಬರುತ್ತದೆ. ತಂದೆ, ತಾಯಿ ನನಗೆ ಸಂಸ್ಕಾರ ಸೌಜನ್ಯತೆ ಕಲಿಸಿದ್ದಾರೆ. ಆದ್ದರಿಂದ ಆ ಮಟ್ಟಕ್ಕಿಳಿಯಲಾರೆ ಎಂದರು. ನನ್ನ ತಂದೆ ಸ್ವಂತ ಹಣದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ಸಂಪೂರ್ಣ ನೆಲಕ್ಕಚ್ಚಿದ ಕಾಂಗ್ರೆಸ್ ನ್ನು ನಾನು ಪುನರುಜ್ಜೀವನ ಮಾಡಿದ್ದೆ. ತಾಯಿ ಪ್ರಾಮಾಣಿಕ ಸೇವೆಯಿಂದ ಸಚಿವೆಯಾಗಿದ್ದಾರೆ ಎಂದರು.
You must be logged in to post a comment Login