LATEST NEWS
ಮೂರು ವೋಟರ್ ಐಡಿ ಕಾರ್ಡ್ ಹೊಂದಿರುವ ಬಗ್ಗೆ ಪ್ರಕಾಶ್ ರೈ ಸ್ಪಷ್ಟನೆ

ಮೂರು ವೋಟರ್ ಐಡಿ ಕಾರ್ಡ್ ಹೊಂದಿರುವ ಬಗ್ಗೆ ಪ್ರಕಾಶ್ ರೈ ಸ್ಪಷ್ಟನೆ
ಮಂಗಳೂರು ಡಿಸೆಂಬರ್ 1: ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿರುವ ಪ್ರಕಾಶ್ ರೈ ಅವರ ಮೂರು ವೋಟರ್ ಐಡಿ ಕುರಿತಂತೆ ಇದು ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿರುವ ಜನನುಡಿ 2018ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ನಾನು ಒಂದೇ ಒಂದು ವೋಟರ್ ಐಡಿ ಹೊಂದಿದ್ದೇನೆ. ಆದರೆ ಕೆಲವರು ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ ರೈ ಪ್ರತಿಕ್ರಿಯಿಸಿದ್ದಾರೆ.
ಮೂರು ಮತದಾರರ ಗುರುತಿನ ಹೊಂದಿರುವ ಆರೋಪದ ಕುರಿತು ಸ್ಪಷ್ಟನೆ ನೀಡಿದ ಅವರು ಕೆಲವರು ತಪ್ಪು ಗ್ರಹಿಕೆಯಿಂದ ದೂರು ಕೊಟ್ಟಿರಬೇಕು. ಒಂದು ವೇಳೆ ಅವರ ಬಳಿ ಆಧಾರಗಳಿದ್ದರೆ ರುಜುವಾತು ಮಾಡಲಿ. ನಾನು ಕೂಡ ನನ್ನ ಬಳಿ ಒಂದೇ ವೋಟರ್ ಐಡಿ ಇರುವುದನ್ನು ಸಾಬಿತು ಮಾಡುತ್ತೇನೆ ಎಂದು ತಿಳಿಸಿದರು.

ಕೆಲವರು ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಆರೋಪಕ್ಕೆ ಮುಂದಾಗಿದ್ದಾರೆ. ಪ್ರಶ್ನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಕರ್ನಾಟಕದಲ್ಲಿ ಮತದಾನ ಮಾಡುತ್ತಿಲ್ಲವೆಂದು ಅನೇಕರು ದೂರಿದ್ದಾರೆ. ತಮಿಳುನಾಡಿನ ಅಡಿಯಾರ್ ನಲ್ಲಿ ನಾನು 20 ವರ್ಷಗಳಿಂದ ವಾಸವಾಗಿದ್ದೇನೆ. ಹೀಗಾಗಿ ಅಲ್ಲಿ ಮಾತ್ರ ಮತದಾನದ ಗುರುತಿನ ಚೀಟಿ ಪಡೆದುಕೊಂಡಿರುವೆ. ಭಾರತದ ಪ್ರಜೆಯಾಗಿರುವ ನಾನು ಎಲ್ಲಿಯಾದರೂ ಮತದಾನದ ಹಕ್ಕನ್ನು ಪಡೆದುಕೊಂಡಿರುವೆ ಎಂದು ತಿಳಿಸಿದರು.