ಮಂಗಳೂರು ಗ್ಯಾಂಗ್ ರೇಪ್ ಪ್ರಕರಣ ನಿರ್ಲಕ್ಷ್ಯವಹಿಸಿದ ಎಎಸ್ಐ ವಜಾಗೊಳಿಸಿ – ವಿಧಾನಪರಿಷತ್ ಸದಸ್ಯ ಬೋಜೆಗೌಡ ಆಗ್ರಹ

ಮಂಗಳೂರು ಡಿಸೆಂಬರ್ 1: ಮಂಗಳೂರು ಯುವತಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನಿರ್ಲಕ್ಷ್ಯವಹಿಸಿದ ಎಎಸ್ಐ ಅಮಾನತು ಸಾಲದು ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಬೋಜೆಗೌಡ ಆಗ್ರಹಿಸಿದ್ದಾರೆ.

ಮಂಗಳೂರು ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ಥೆ ಬಂಟ್ವಾಳ ಠಾಣೆಗೆ ದೂರು ದಾಖಲಿಸಲು ತೆರಳಿದ್ದರು. ಆ ಸಂದರ್ಭ ಕರ್ತವ್ಯದಲ್ಲಿ ಇಬ್ಬರು ಪೊಲೀಸರು ದೂರನ್ನು ಆಲಿಸಿದ್ದಾರೆ, ಆದರೆ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಕರಣದಲ್ಲಿ ಈಗಾಗಲೇ ನಿರ್ಲಕ್ಷ್ಯ ವಹಿಸಿದ ಎಎಸ್ಐ ಅಮಾನತುಗೊಳಿಸಲಾಗಿದೆ. ಆದರೆ ಆ ಸಂದರ್ಭದಲ್ಲಿದ್ದ ಇನ್ನೊಬ್ಬ ಪೊಲೀಸ್ ಸಿಬ್ಬಂದಿ ವಿಚಾರಣೆ ಇನ್ನೂ ನಡೆದಿಲ್ಲ. ಅಲ್ಲದೆ ಇಂತಹ ನಿರ್ಲಕ್ಷ್ಯಕ್ಕೆ ಅಮಾನತು ಶಿಕ್ಷೆ ಸಾಲದು, ಅಂತಹವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಹಾಜರಿದ್ದ ಇಬ್ಬರು ಪೊಲೀಸರಿಗೂ ಜವಾಬ್ದಾರಿ ಇತ್ತು, ಇನ್ನೋರ್ವ ಪೊಲೀಸ್ ವಿಚಾರಣೆ ಯಾಕೆ ನಡೆದಿಲ್ಲ..? ಅವರನ್ನು ವಿಚಾರಣೆ ನಡೆಸಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

Facebook Comments

comments