LATEST NEWS
ಕಾಮನ್ ವೆಲ್ತ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಮಂಗಳೂರಿನ ಪ್ರದೀಪ್ ಗೆ ಚಿನ್ನ

ಕಾಮನ್ ವೆಲ್ತ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಮಂಗಳೂರಿನ ಪ್ರದೀಪ್ ಗೆ ಚಿನ್ನ
ಮಂಗಳೂರು ಸೆಪ್ಟೆಂಬರ್ 18: ಕೆನಡದ ಸೆಂಟ್ ಜೋನ್ಸ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಬೆಂಚ್ ಪ್ರೆಸ್ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಬಾರತ ತಂಡವನ್ನು ಪ್ರತಿನಿಧಿಸಿದ್ದ ಮೂಲತಃ ಮಂಗಳೂರಿನ ಉರ್ವಸ್ಟೋರಿನ ಪ್ರದೀಪ್ ಕುಮಾರ್ ಆಚಾರ್ಯ ಅವರು 83 ಕೆ.ಜಿ ಸೀನಿಯರ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಪ್ರದೀಪ್ ಒಟ್ಟು 210 ಕೆ.ಜಿ ಭಾರ ಎತ್ತಿದ್ದರು. 180 ಕೆ.ಜಿ ಭಾರ ಎತ್ತಿದ ಕೆನಡಜ ಟಾಮ್ ಕೀನ್ ಬೆಳ್ಳಿ ಮತ್ತು 175 ಕೆ.ಜಿ ಭಾರ ಎತ್ತಿದ ರಾಬ್ ಡೈಕ್ ಕಂಚು ಗೆದ್ದರು. ಪ್ರದೀಪ್ ತಮ್ಮ ಮೊದಲ ಪ್ರಯತ್ನದಲ್ಲಿಯೇ 200 ಕೆ.ಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟರು. ಪ್ರದೀಪ್ ಅವರ ಈ ಸಾಧನೆಯಿಂದಾಗಿ ಭಾರತ ಒಟ್ಟು 3 ಚಿನ್ನದ ಪದಕ ಗೆದ್ದಂತಾಗಿದೆ.
