DAKSHINA KANNADA
7 ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಸಂಘದ ಪ್ರತಿಭಟನೆ
ಪುತ್ತೂರು ಅಗಸ್ಟ್ 10: 7 ನೇ ವೇತನ ಆಯೋಗ ವರದಿ ಸಂಪೂರ್ಣ ಜಾರಿಗೆ ಅಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ಮತ್ತು ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ಇವುಗಳ ನೇತೃತ್ವದಲ್ಲಿ ಪುತ್ತೂರು ವಿಭಾಗೀಯ ಅಂಚೆ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಸುನಿಲ್ ದೇವಾಡಿಗ ಕೇಂದ್ರ ಸರಕಾರ ಕಮಲೇಶ್ಚಂದ್ರ ವರದಿಯನ್ನು ಜಾರಿಗೆ ತರದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಇದರಿಂದ ಗ್ರಾಮೀಣ ಅಂಚೆ ನೌಕರರಿಗೆ ಅನ್ಯಾಯವಾಗಿದೆ.
7 ನೇ ವೇತನ ಆಯೋಗದ ಅನುಷ್ಠಾನಕ್ಕೂ ಕೇಂದ್ರ ಸರಕಾರ ಮೀನಾಮೇಷ ಎಣಿಸುತ್ತಿದ್ದು, ಕೇಂದ್ರ ಸರಕಾರದ ಎಲ್ಲಾ ಪ್ರಮುಖ ಯೋಜನೆಗಳನ್ನು ಗ್ರಾಮ ಗ್ರಾಮಕ್ಕೆ ಮುಟ್ಟಿಸುವ ಕೆಲಸವನ್ನೂ ಗ್ರಾಮೀಣ ಅಂಚೆ ನೌಕರರು ಪ್ರಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.