Connect with us

  FILM

  ಅಪಘಾತದಲ್ಲಿ ಬಂಗಾಳಿ ಕಿರುತೆರೆ ನಟಿ ಸುಚಂದ್ರಾ ದಾಸ್‌ಗುಪ್ತ ಸಾವು

  ಕೋಲ್ಕತ್ತ ಮೇ 21: ಸ್ಕೂಟರ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಬಂಗಾಳಿಯ ಜನಪ್ರಿಯ ಕಿರುತೆರೆ ನಟಿ ಸುಚಂದ್ರಾ ದಾಸ್‌ಗುಪ್ತ ಸಾವನಪ್ಪಿದ್ದಾರೆ. ಕೋಲ್ಕತ್ತದ ಹೊರವಲಯದ ಬಾರಾನಗರದಲ್ಲಿ ವೇಗವಾಗಿ ಬಂದ ಟ್ರಕ್ ಆಕೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುಚಂದ್ರಾ ದಾಸ್‌ಗುಪ್ತ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.


  ಜನಪ್ರಿಯ ಬಂಗಾಳಿ ಧಾರಾವಾಹಿ ‘ಗೌರಿ ಎಲೋ’ನಲ್ಲಿನ ಅಭಿನಯಕ್ಕಾಗಿ ಸುಚಂದ್ರಾ ದಾಸ್‌ಗುಪ್ತ ಸಾಕಷ್ಟು ಜನಪ್ರಿಯರಾಗಿದ್ದರು. ಸುಚಂದ್ರಾ ಸಾವಿನಿಂದಾಗಿ ಬಂಗಾಳಿ ಕಿರುತೆರೆ ಲೋಕ ಆಘಾತಕ್ಕೀಡಾಗಿದೆ. ನಟಿಯಾಗಿ ಜನಪ್ರಿಯರಾಗಿದ್ದ ಸುಚಂದ್ರಾ, ಎಲ್ಲರೊಂದಿಗೆ ಬೆರೆಯುವ ತಮ್ಮ ನಡವಳಿಕೆಯಿಂದ ಜನರ ಪ್ರೀತಿಗೆ ಪಾತ್ರರಾಗಿದ್ದರು. ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply