Connect with us

    FILM

    ಕಿರುತೆರೆ ರಂಗದಲ್ಲಿ ಸಾಲು ಸಾಲು ಸಾವು….ಖ್ಯಾತ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ನಿಧನ

    ಮುಂಬೈ ಮೇ 24: ಕಿರುತೆರೆ ರಂಗದಲ್ಲಿ ಸಾಲು ಸಾಲು ಸಾವುಗಳು ಸಂಭವಿಸುತ್ತಿದ್ದು, ಇಂದು ಬೆಳಿಗ್ಗೆ ಕಿರುತೆರೆ ನಟಿಯೊಬ್ಬಳು ಕಾರು ಅಪಘಾತದಲ್ಲಿ ಸಾವನಪ್ಪಿದ್ದ ಸುದ್ದಿಯ ಬೆನ್ನಲ್ಲೇ ಇದೀಗ ಮತ್ತೋರ್ವ ಖ್ಯಾತ ನಟ ಹೃದಯಾಘಾತದಿಂದ ನಿಧನರಾಗಿದ್ದಾರೆ.


    ಟಿವಿ ಲೋಕದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಿತೇಶ್ ಪಾಂಡೆ (51) ಮೃತರು. ಉತ್ತರಾಖಂಡದ ಅಲ್ಮೋರಾ ಕುಮಾನ್ ಮೂಲದವರಾದ ಅವರು ಕಳೆದ 25 ವರ್ಷದಿಂದ ಕಿರುತೆರೆಯಲ್ಲಿ ಕೆಲಸ ಮಾಡಿಕೊಂಡಿದ್ದರು.

    1990 ರಲ್ಲಿ ರಂಗಭೂಮಿಯಲ್ಲಿ ನಟಿಸುವ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಅವರು 1995 ರಲ್ಲಿ ಬಂದ ʼತೇಜಸ್‌ʼ ಸಿನಿಮಾದಲ್ಲಿ ಪತ್ತೇದಾರಿ ಪಾತ್ರವೊಂದರಲ್ಲಿ ನಟಿಸಿ ಗಮನ ಸೆಳೆದಿದ್ದರು. ಆ ಬಳಿಕ ಕಿರುತೆರೆಯಲ್ಲಿ ಸಾಲು ಸಾಲಾಗಿ ಧಾರಾವಾಹಿಗಳಲ್ಲಿ ನಟಿಸಿದರು. ʼಮಂಜಿಲೀನ್ ಅಪ್ನಿ ಅಪ್ನಿʼ, ʼಅಸ್ತಿತ್ವ ಏಕ್ ಪ್ರೇಮ್ ಕಹಾನಿʼ, ʼಸಾಯಾ, ಜುಸ್ತಜೂʼ ದುರ್ಗೇಶ್ ನಂದಿನಿ ಮುಂತಾದ ಸೀರಿಯಲ್‌ ಗಳಲ್ಲಿ ನಟಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply